

ಪ್ರಮುಖ ಮುಖ್ಯಾಂಶಗಳು
ನಮ್ಮ ರಬ್ಬರ್ ತೋಟವನ್ನು ಗುತ್ತಿಗೆಗೆ ನೀಡಿದ್ದೆವು. ಬೆಲೆಯಲ್ಲೂ ಏರಿಳಿತವಾಗುತ್ತಿದ್ದ ಕಾರಣ ಲಾಭದ ಹಾದಿಯಿಂದ ನಷ್ಟದತ್ತ ಸಾಗುವಂತಾಗಿತ್ತು. ಕ್ರಮೇಣ ಮರಗಳಿಂದ ಹಾಲು ಬರುವುದು ನಿಂತು ಹೋಯಿತು. ಹೀಗಾಗಿ ಅದೆಲ್ಲವನ್ನೂ ಕಟಾವು ಮಾಡಿ ಅಡಕೆ ಬೆಳೆಯಲು ತೀರ್ಮಾನಿಸಿದ್ದೇವೆ.
ಯಾವುದೇ ಬಗರ್‌ಹುಕುಂ ಸಾಗುವಳಿ ಭೂಮಿಯಲ್ಲಿ ರಬ್ಬರ್, ನೀಲಗಿರಿ, ಅಕೇಶಿಯಾ ಬೆಳೆದಿದ್ದರೆ ಅದಕ್ಕೆ ಹಕ್ಕುಪತ್ರ ನೀಡಲು ಕಂದಾಯ ಕಾಯ್ದೆಯಡಿ ಅವಕಾಶವಿಲ್ಲ. ಇವುಗಳನ್ನು ವಾಣಿಜ್ಯ ಬೆಳೆಗಳೆಂದು ನಿರ್ಧರಿಸಿರುವುದರಿಂದ ಹಕ್ಕುಪತ್ರದ ಅವಕಾಶ ನಿರಾಕರಿಸಲಾಗುತ್ತದೆ.