ಜನವಸತಿ ಪ್ರದೇಶವನ್ನು ಸಿಂಳೀಕ ವನ್ಯಜಿವಿ ಅಭಯಾರಣ್ಯ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಒತ್ತಾಯಿಸಿ ಸ್ಥಳಿಯರು ಶಾಸಕ ಗೋಪಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು. ಪ್ರೀತಮ್ ಜೈನ್, ದಿನೇಶ್, ಸೋಮಶೇಖರ್ ಇತರರಿದ್ದರು.
ಕಾರ್ಗಲ್: ಶರಾವತಿ ಕಣಿವೆ ಸಿಂಳೀಕ ವನ್ಯಜಿವಿ ಅಭಯಾರಣ್ಯ ವ್ಯಾಪ್ತಿಯಿಂದ ಜನವಸತಿ ಪ್ರದೇಶವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಭಾರಂಗಿ ಹೋಬಳಿ ಭಾನುಕುಳಿ ಗ್ರಾಪಂ ವ್ಯಾಪ್ತಿಯ ನಿವಾಸಿಗಳು ಭಾನುವಾರ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಮನವಿ ಸಲ್ಲಿಸಿದರು.
ಅಭಯಾರಣ್ಯದ ೂಷಣೆ ಸಂದರ್ಭ ಕಾನೂನಾತ್ಮಕವಾಗಿ ಸರ್ವೇ ಆಗಿರುವುದಿಲ್ಲ. ಜನವಸತಿ ಪ್ರದೇಶಗಳು ಅಭಯಾರಣ್ಯದ ವ್ಯಾಪ್ತಿಗೆ ಸೇರಿರುವ ಹಿನ್ನೆಲೆಯಲ್ಲಿ ಗಡಿ ಬದಲಾವಣೆ ಹಾಗೂ ಮರು ವಿನ್ಯಾಸಕ್ಕೆ ಸಮಿತಿ ರಚಿಸಲು ಅಗತ್ಯ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ನಿಯೋಗ ಒತ್ತಾಯಿಸಿದೆ.
ಭಾನುಕುಳಿ ಸರ್ಕಾರಿ ಶಾಲೆಯ ದುರಸ್ತಿ ಕಾರ್ಯ ಹಾಗೂ ಶಿಕರ ಕೊರತೆ, ಮೈಯಳ್ಳಿ ಬೀರೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ನೀಡುವಂತೆ ಮನವಿ ಮಾಡಲಾಯಿತು.