ಪ್ರಾಣ ಹೋದರೂ ಯೋಜನೆಗೆ ಅವಕಾಶ ನೀಡಲ್ಲ | Sharavathi Pumped Storage

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಪ್ರಮುಖ ಮುಖ್ಯಾಂಶಗಳು

  • ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ವಿರೋಧ
  • ಏ.16ರಂದು ಶಿವಮೊಗ್ಗದಲ್ಲಿ ಸೈಕಲ್, ಇತರ ವಾಹನಗಳ ಜಾಥಾ
  • ಸರ್ಕಾರ ಎಚ್ಚರಿಕೆ ನೀಡಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ: ಪಶ್ಚಿಮಘಟ್ಟ(Western Ghats)ದ ವಿನಾಶಕ್ಕೆ ಕಾರಣ ಆಗಲಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ನಮ್ಮ ಪ್ರಾಣ ಹೋದರೂ ಅವಕಾಶ ನೀಡುವುದಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ(K.S.Eshwarappa) ಎಚ್ಚರಿಕೆ ನೀಡಿದರು.
ಈಗಾಗಲೇ ಹೊನ್ನಾವರದ ಬಂಗಾರಮಕ್ಕಿ ಶ್ರೀ ಮಾರುತಿ ಗುರೂಜಿ(Maruti guruji) ಅವರು ಯೋಜನೆ ವಿರೋಧಿಸಿ ಎಚ್ಚರಿಕೆ ನೀಡಿದ್ದಾರೆ. ಸ್ವಾಮೀಜಿ ಅವರ ಹೋರಾಟಕ್ಕೆ ನಾವೂ ಕೈಜೋಡಿಸಿದ್ದೇವೆ. ನಮ್ಮ ಜೀವಗಳನ್ನೇ ಕೊಡಲು ಸಿದ್ಧರಿದ್ದೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯೋಜನೆ ಕೈಬಿಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಪರಿಸರಕ್ಕಾಗಿ ನಾವು ಮತ್ತು ರಾಷ್ಟ್ರಭಕ್ತರ ಬಳಗ ಯೋಜನೆ ವಿರುದ್ಧ ಹಲವು ಸುತ್ತಿನ ಹೋರಾಟ ಮಾಡಲಾಗಿದೆ. ಇದೀಗ ಏ.16ರಂದು ಶಿವಮೊಗ್ಗ ನಗರದಲ್ಲಿ ಸೈಕಲ್ ಹಾಗೂ ಇತರ ವಾಹನಗಳ ಜಾಥಾ(rally) ಹಮ್ಮಿಕೊಂಡಿದ್ದೇವೆ ಎಂದರು.
ಯೋಜನೆಯಿಂದ ಪರಿಸರ ಮೇಲಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಆಗುತ್ತಿದೆ. 16ರಂದು ಜಾಥಾವನ್ನು ಭರತ್ ನ್ಯೂರೋ ಕ್ಲಿನಿಕ್ ವೈದ್ಯ ಶಿವರಾಮಕೃಷ್ಣ ಉದ್ಘಾಟಿಸುವರು. ಶರಾವತಿ ನರ್ಸಿಂಗ್ ಹೋಮ್‌ನ ಡಾ. ನಾರಾಯಣ್ ಮುಖ್ಯ ಭಾಷಣ ಮಾಡುವರು ಎಂದು ಹೇಳಿದರು.
ಇಂಧನ ಸಚಿವರು ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು 10 ಸಾವಿರ ಕೋಟಿ ರೂ. ಲೂಟಿ ಮಾಡುವ ಸಂಚು ಮಾಡಿದ್ದಾರೆ. 30 ಪ್ರಶ್ನೆಗಳಿಗೆ ಕೆಪಿಸಿಎಲ್(Kpcl) ಹಾರಿಕೆ ಉತ್ತರ ಕೊಟ್ಟಿದೆ. ರಾಷ್ಟ್ರೀಯ ಭದ್ರತೆ(National Security) ನೆಪವೊಡ್ಡಿ ಯೋಜನೆಯ ಡಿಪಿಆರ್ ನೀಡಲು ನಿರಾಕರಿಸಿದೆ. ಹಾಗಾಗಿ ಶಿವಮೊಗ್ಗದ ಎಲ್ಲ ನಾಗರಿಕರು ರಾಜ್ಯ ಮತ್ತು ರಾಷ್ಟ್ರಕ್ಕೆ ಮಾರಕವಾದ ಯೋಜನೆ ವಿರುದ್ಧದ ಹೋರಾಟಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.
ಪ್ರಮುಖರಾದ ಡಾ. ಶೇಖರ್ ಗೌಳೇರ್, ಮೋಹನ್, ಅಶೋಕ್‌ಕುಮಾರ್, ಜನಾರ್ದನ ಪೈ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
"

ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಜಾರಿಗೆ ತರುತ್ತಿರುವುದು ಸ್ವಾಗತಾರ್ಹ. ರಾಷ್ಟ್ರದಲ್ಲಿ ಮಹಿಳಾ ಮೀಸಲಾತಿ ನೀಡುತ್ತಿರುವುದು ಸಂತೋಷದ ವಿಷಯ. ಮನೆ ನಡೆಸುವ ನಾರಿಗೆ ದೇಶ ನಡೆಸುವ ಶಕ್ತಿಯೂ ಇದೆ ಎಂಬ ಕಾರಣಕ್ಕೆ ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net