ಚಾಲಕರ ಪುನಶ್ಚೇತನ ತರಬೇತಿ ಕೇಂದ್ರ ಸ್ಥಾಪಿಸಿ I drivers training center

ಶಿವಮೊಗ್ಗದಲ್ಲಿ ಭಾರಿ ವಾಹನ ಚಾಲಕರ ಪುನಶ್ಚೇತನ ತರಬೇತಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ಕಲ್ಲೂರು ಮೇಘರಾಜ್, ತಡಗಣಿ ನಾಗರಾಜು, ಎಚ್.ಎಂ.ಸಂಗಯ್ಯ, ರಾಗಿಗುಡ್ಡ ಸಂಧ್ಯಾ ಮುಂತಾದವರು ವಿ.ಅಭಿಷೇಕ್ ಅವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗದಲ್ಲಿ ಭಾರಿ ವಾಹನ ಚಾಲಕರ ಪುನಶ್ಚೇತನ ತರಬೇತಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ಕಲ್ಲೂರು ಮೇಘರಾಜ್, ತಡಗಣಿ ನಾಗರಾಜು, ಎಚ್.ಎಂ.ಸಂಗಯ್ಯ, ರಾಗಿಗುಡ್ಡ ಸಂಧ್ಯಾ ಮುಂತಾದವರು ವಿ.ಅಭಿಷೇಕ್ ಅವರಿಗೆ ಮನವಿ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಭಾರಿ ವಾಹನ ಚಾಲಕರಿಗೆ ಸಮಸ್ಯೆ
  • ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ಪದಾಧಿಕಾರಿಗಳು ಆಗ್ರಹ
  • ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆ
ಶಿವಮೊಗ್ಗ: ನಗರದಲ್ಲಿ ಭಾರಿ ವಾಹನ ಚಾಲಕರ (drivers) ಪುನಶ್ಚೇತನ ತರಬೇತಿ (training) ಕೇಂದ್ರ (center) ಆರಂಭಿಸುವಂತೆ ಸರ್ಕಾರವನ್ನು ಒತ್ತಾಯಿಸಿದ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ಪದಾಧಿಕಾರಿಗಳು ಮಂಗಳವಾರ ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ಪುತ್ತೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವಲಯಗಳಾದ ಸಾಗರ, ತೀರ್ಥಹಳ್ಳಿ, ಬಂಟ್ವಾಳ, ತಲಪಾಡಿ ವ್ಯಾಪ್ತಿಯಲ್ಲಿ ಭಾರಿ ವಾಹನ ಚಾಲನಾ ಪರವಾನಗಿ ಹೊಂದಿರುವ ಚಾಲಕರು ತಮ್ಮ ಪರವಾನಗಿ ನವೀಕರಣಕ್ಕಾಗಿ ಕಲಬುರಗಿ, ಮಂಗಳೂರು, ಧಾರವಾಡ ಮತ್ತು ಬೆಂಗಳೂರು (ಸಿಂಗಾನಾಯಕನಹಳ್ಳಿ) ತರಬೇತಿ ಸಂಸ್ಥೆಗಳಿಗೆ ಅಲೆಯಬೇಕಾಗಿದೆ. ಇದರಿಂದ ಅವರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ ಎಂದು ಟ್ರಸ್ಟ್‌ನ ಪದಾಧಿಕಾರಿಗಳು ತಿಳಿಸಿದರು.
ಶಿವಮೊಗ್ಗ ಜಂಟಿ ಆಯುಕ್ತರ ಕಚೇರಿ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳಿಗೆ ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳ ವ್ಯಾಪ್ತಿಗೆ ಒಳಪಟ್ಟು ಭಾರಿ ವಾಹನ ಚಾಲಕರಿಗೆ ಪುನಶ್ಚೇತನ ತರಬೇತಿ ಕೇಂದ್ರವನ್ನು ಶಿವಮೊಗ್ಗದಲ್ಲೇ ತೆರೆಯಬೇಕೆಂದು ಆಗ್ರಹಿಸಿದರು.
ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಮೋಹನರಾಜ, ಎಚ್.ಎಂ.ಸಂಗಯ್ಯ, ಎಂ.ನಂಜುಂಡಪ್ಪ ಎಂ, ಕುಪ್ಪಯ್ಯ, ತಡಗಣಿ ನಾಗರಾಜು, ಮಂಜಪ್ಪ, ರೋಹಿತ್, ಶಂಕ್ರನಾಯ್ಕ, ಕೆ.ಎಸ್. ರಾಮು, ವಿ. ರಾಮಯ್ಯ, ಚಂದ್ರಪ್ಪ, ಶಿವಣ್ಣ ವೇಣುಗೋಪಾಲ್, ರಕ್ಷಿತ್, ರಾಗಿಗುಡ್ಡ ಸಂಧ್ಯಾ, ಕೆ. ಬಸವರಾಜ್ ಮುಂತಾದವರು ಮನವಿ ಸಲ್ಲಿಸುವ ಸಂದರ್ಭದಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net