ಆಶ್ರಯ ಮನೆಗಳ ಹಂಚಿಕೆ ಪ್ರಗತಿ ಕುರಿತು ಈಶ್ವರಪ್ಪ ಚರ್ಚೆ । Rastrabaktara balaga

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರು ಮಹಾನಗರ   ಪಾಲಿಕೆ ಆಯುಕ್ತರ ಕಚೇರಿಗೆ ಭೇಟಿ ನೀಡಿ ಗೋವಿಂದಾಪುರ ಆಶ್ರಯ ಮನೆಗಳ ಹಂಚಿಕೆ ಪ್ರಗತಿಯ ಕುರಿತು ಚರ್ಚಿಸಿದರು.   ಕೆ.ಮಾಯಣ್ಣಗೌಡ, ಕೆ.ಈ.ಕಾಂತೇಶ್, ಇ.ವಿಶ್ವಾಸ್, ಶ್ರೀಕಾಂತ್, ಶಿವಾಜಿ, ಎಸ್.ಜಿ.ಬಾಲು, ಮೋಹನ್ ಜಾದವ್ ಇದ್ದರು.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರು ಮಹಾನಗರ ಪಾಲಿಕೆ ಆಯುಕ್ತರ ಕಚೇರಿಗೆ ಭೇಟಿ ನೀಡಿ ಗೋವಿಂದಾಪುರ ಆಶ್ರಯ ಮನೆಗಳ ಹಂಚಿಕೆ ಪ್ರಗತಿಯ ಕುರಿತು ಚರ್ಚಿಸಿದರು. ಕೆ.ಮಾಯಣ್ಣಗೌಡ, ಕೆ.ಈ.ಕಾಂತೇಶ್, ಇ.ವಿಶ್ವಾಸ್, ಶ್ರೀಕಾಂತ್, ಶಿವಾಜಿ, ಎಸ್.ಜಿ.ಬಾಲು, ಮೋಹನ್ ಜಾದವ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿದ ರಾಷ್ಟ್ರಭಕ್ತರ ಬಳಗದ ಪ್ರಮುಖರು
  • ಸ್ಥಳದಲ್ಲೇ ಸಚಿವ ಮಧು ಬಂಗಾರಪ್ಪಗೆ ಕರೆ ಮಾಡಿದ ಕೆ.ಎಸ್.ಈಶ್ವರಪ್ಪ
  • ಡಿಸಿ ಕಚೇರಿ ಎದುರಿನ ಆಟದ ಮೈದಾನದ ವಸ್ತುಸ್ಥಿತಿ ವರದಿ ಕುರಿತು ಮಾಹಿತಿ
ಶಿವಮೊಗ್ಗ: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗ(Rastrabaktara balaga)ದ ಪ್ರಮುಖರು ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಅವರನ್ನು ಭೇಟಿ ಮಾಡಿ ಗೋವಿಂದಾಪುರ(Govindapura) ಆಶ್ರಯ ಮನೆಗಳ ಹಂಚಿಕೆ ಪ್ರಗತಿ ಕುರಿತು ಚರ್ಚಿಸಿದರು.
ಮನೆಗಳ ನಿರ್ಮಾಣ, ಪೂರ್ಣಗೊಂಡಿರುವ ಮನೆಗಳಿಗೆ ಮೂಲಸೌಕರ್ಯ ಕಲ್ಪಿಸುವ ಬಗ್ಗೆ ಆಯುಕ್ತರೊಡನೆ ಚರ್ಚಿಸಿದರು. ಸ್ಥಳದಲ್ಲೇ ಈಶ್ವರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಕರೆ ಮಾಡಿ ಆಶ್ರಯ ಮನೆಗಳ ವಿಚಾರವಾದ ಸಮಸ್ಯೆಗಳ ಮನವರಿಕೆ ಮಾಡಿಕೊಟ್ಟು ತ್ವರಿತವಾಗಿ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.
ಮಹಾನಗರ ಪಾಲಿಕೆ(Mahanagara palike)ಯಿಂದ ನಿರ್ಮಿಸಲಾದ ವಾಣಿಜ್ಯ ಮಳಿಗೆ(Commercial store)ಗಳನ್ನು ಲಾನುಭವಿಗಳಿಗೆ ಹಂಚಿಕೆ, ಇ-ಆಸ್ತಿ(E-asset) ನೋಂದಣಿಯಲ್ಲಿ ಆಗುತ್ತಿರುವ ಗೊಂದಲ ನಿವಾರಣೆ, ರೋಟರಿ ಚಿತಾಗಾರದ ನಿರ್ವಹಣೆ, ನಗರದ ಕೆಲವು ಬಡಾವಣೆಗಳ ರಸ್ತೆ, ಒಳಚರಂಡಿ, ಬೀದಿದೀಪ, ಸಾರ್ವಜನಿಕ ಪಾರ್ಕ್‌ಗಳ ನಿರ್ವಹಣೆ ಇತರ ಸಮಸ್ಯೆಗಳ ಕುರಿತು ಇದೇ ವೇಳೆ ಚರ್ಚಿಸಿದರು.
ವಿಶೇಷವಾಗಿ ಜಿಲ್ಲಾಧಿಕಾರಿ ಕಚೇರಿ ಎದುರಿನ ಆಟದ ಮೈದಾನ(Playground)ದ ವಸ್ತುಸ್ಥಿತಿ ವರದಿ ಕುರಿತು ಆಯುಕ್ತರಿಂದ ಮಾಹಿತಿ ಪಡೆದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಯುಕ್ತ ಮಾಯಣ್ಣಗೌಡ, ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಆಯಾ ಸಮಸ್ಯೆಗಳಿಗೆ ಸ್ಪಂದಿಸಲು ನಿರ್ದೇಶನ ನೀಡಿದರು. ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಈ.ಕಾಂತೇಶ್, ಇ.ವಿಶ್ವಾಸ್, ಶ್ರೀಕಾಂತ್, ಶಿವಾಜಿ, ಎಸ್.ಜಿ.ಬಾಲು, ಮೋಹನ್ ಜಾದವ್ ಮುಂತಾದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net