ಸಜಾ ಬಂಧಿಗೆ ನೀಡಲು ತಂದಿದ್ದ ಪದಾರ್ಥದಲ್ಲಿ ಮಾದಕ ವಸ್ತು ಪತ್ತೆ
ಸಂದರ್ಶಕನನ್ನು ವಶಕ್ಕೆ ಪಡೆದ ತುಂಗಾನಗರ ಠಾಣೆ ಪೊಲೀಸರು
ಭದ್ರಾವತಿ ವೀರಾಪುರದ ಮೊಹಮ್ಮದ್ ಇಬ್ರಾಹಿಂ ಮೀರಾ ಬಂಧಿತ
ಶಿವಮೊಗ್ಗ: ಸೋಗಾನೆಯ ಕೇಂದ್ರ ಕಾರಾಗೃಹ(Central Jail)ದ ಸಜಾ ಬಂಧಿಗೆ ನೀಡಲು ಬೇಕರಿಯಿಂದ ತಂದಿದ್ದ ಪದಾರ್ಥದಲ್ಲಿ ಮಾದಕ ವಸ್ತು(Narcotics) ಪತ್ತೆಯಾಗಿದ್ದು, ಸಂದರ್ಶಕನನ್ನು ಪೊಲೀಸರು ವಶಕ್ಕೆ ಪಡೆದು ತುಂಗಾನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಭದ್ರಾವತಿ ವೀರಾಪುರದ ಮೊಹಮ್ಮದ್ ಇಬ್ರಾಹಿಂ ಮೀರಾ ಬಂಧಿತ ಆರೋಪಿ. ಈತ ಜೈಲಿನಲ್ಲಿರುವ ಸೈಯದ್ ಸಮೀರ್ ಎಂಬಾತನನ್ನು ಭೇಟಿ ಮಾಡಲು ಬಂದಿದ್ದ. ಸೋಮವಾರ ಬೆಳಗ್ಗೆ ಸಂದರ್ಶಕರ ಕೊಠಡಿಗೆ ತೆರಳುವ ಮುನ್ನ ತಪಾಸಣೆಗೆ ಒಳಪಡಿಸಿದಾಗ ಚೌ ಚೌ(Chow Chow) ಪೊಟ್ಟಣದಲ್ಲಿ ಬಿಳಿ ಬಣ್ಣದ ಹರಳು ರೂಪದ ಅನುಮಾನಸ್ಪದ ಮಾದಕ ವಸ್ತು ಪತ್ತೆಯಾಗಿತ್ತು.
ಜೈಲು ಸಿಬ್ಬಂದಿ ಮೊಹಮ್ಮದ್ ಇಬ್ರಾಹಿಂನನ್ನು ವಶಕ್ಕೆ ಪಡೆದಿದ್ದರು. ಘಟನೆ ಸಂಬಂಧ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್ ಅವರು ನೀಡಿದ ದೂರಿನ ಮೇರೆಗೆ ಮೊಹಮ್ಮದ್ ಇಬ್ರಾಹಿಂ ವಿರುದ್ಧ ತುಂಗಾನಗರ ಠಾಣೆ(Tunganagar Station)ಯಲ್ಲಿ ಪ್ರಕರಣ ದಾಖಲಾಗಿದೆ.