ರಸ್ತೆ ನಿರ್ಮಿಸುವಂತೆ ದೊಡ್ಡಿಮಟ್ಟಿ ಗ್ರಾಮಸ್ಥರ ಒತ್ತಾಯ । Doddamatti Village
ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ದೊಡ್ಡಮಟ್ಟಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಧೀರರಾಜ್ ಹೊನ್ನವಿಲೆ, ಮಂಜುನಾಥ್, ವರಲಕ್ಷ್ಮಿ ಪ್ರಕಾಶ್, ದೇಶಾದ್ರಿ ಹೊಸ್ಮನೆ ಇತರರಿದ್ದರು.
Published on:
Copied
Follow Us
ಶಿವಮೊಗ್ಗ: ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಶಿವಮೊಗ್ಗ ತಾಲೂಕು ಕುಂಸಿ ಗ್ರಾಪಂ ವ್ಯಾಪ್ತಿ ದೊಡ್ಡಿಮಟ್ಟಿ (Doddamatti) ಗ್ರಾಮದ ನಿವಾಸಿಗಳು ಹಾಗೂ ಸ್ತ್ರೀಶಕ್ತಿ ಸಂಘಟನೆ ಕಾರ್ಯಕರ್ತೆಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ(Dc office) ಎದುರು ಪ್ರತಿಭಟನೆ ನಡೆಸಿದರು.
ಕುಂಸಿ(Kumsi) ಗ್ರಾಪಂ ವ್ಯಾಪ್ತಿಯಲ್ಲಿ ಶಿವಮೊಗ್ಗ-ಸಾಗರ ಮುಖ್ಯ ರಸ್ತೆಯಿಂದ 7 ಕಿ.ಮೀ. ದೂರದಲ್ಲಿರುವ ದೊಡ್ಡಿಮಟ್ಟಿ ಗ್ರಾಮವು ಅಸ್ತಿತ್ವಕ್ಕೆ ಬಂದು 60 ವರ್ಷ ಕಳೆದರೂ ಸುಸಜ್ಜಿತ ರಸ್ತೆ ಕಂಡಿಲ್ಲ. ರಸ್ತೆಗಾಗಿ ಗ್ರಾಪಂ, ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಒಮ್ಮೆ ಚುನಾವಣೆ ಬಹಿಷ್ಕಾರ(Election boycott)ವೂ ಮಾಡಿದ್ದೇವೆ. ಆಗ ತಹಸೀಲ್ದಾರ್ ರಸ್ತೆ ಮಾಡಿಕೊಡುವ ಭರವಸೆ ನೀಡಿದ್ದರು. ಆದರೆ ಈವರೆಗೆ ಬೇಡಿಕೆ ಈಡೇರಿಲ್ಲ. ಅಧಿಕಾರಿಗಳನ್ನು ಕೇಳಿದರೆ ಅರಣ್ಯ ಇಲಾಖೆ (Forest Dept)ಬಿಡುತ್ತಿಲ್ಲ ಎನ್ನುತ್ತಾರೆ ಎಂದು ದೂರಿದರು.
ಜಿಲ್ಲಾ ಭೋವಿ ಸಮಾಜ(Bhovi samaja)ದ ನಿರ್ದೇಶಕ ಧೀರರಾಜ್ ಹೊನ್ನವಿಲೆ ಮಾತನಾಡಿ, ದೊಡ್ಡಿಮಟ್ಟಿ ಗ್ರಾಮದ ಜನರು ಪರಿಶಿಷ್ಟ ಜಾತಿ ಭೋವಿ ಸಮಾಜಕ್ಕೆ ಸೇರಿದವರಿದ್ದಾರೆ. ಒಂದಷ್ಟು ಮರಾಠಿ ಸಮಾಜದವರಿದ್ದಾರೆ. ಗ್ರಾಮದಲ್ಲಿ ಮೂಲಸೌಲಭ್ಯ ಕಲ್ಪಿಸಿಲ್ಲ ಎಂದು ದೂರಿದರು.
ಕುಂಸಿ ಗ್ರಾಪಂ ಮಾಜಿ ಅಧ್ಯಕ್ಷ ಆಂಜನೇಯ, ಅಬ್ಬಲಗೆರೆ ಗ್ರಾಪಂ ಸದಸ್ಯ ಮಂಜುನಾಥ್, ತೀರ್ಥಹಳ್ಳಿ ತಾಲೂಕು ಭೋವಿ ಸಮಾಜದ ಅಧ್ಯಕ್ಷೆ ವರಲಕ್ಷ್ಮಿ ಪ್ರಕಾಶ್, ಪತ್ರಕರ್ತ ದೇಶಾದ್ರಿ ಹೊಸ್ಮನೆ, ದೊಡ್ಡಿಮಟ್ಟಿ ನಿವಾಸಿಗಳು ಇದ್ದರು.