ಸರ್ಕಾರ(Govt)ಗಳೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಸರ್ಕಾರ ಮಾಡಲೆಂದು ಕಾದುಕುಳಿತುಕೊಳ್ಳುವ ಬದಲು ಸಂಘಟನೆಯಿಂದ ಅಂಗವಿಕಲರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕಿದೆ. ಅದಕ್ಕಾಗಿ ಸಕ್ಷಮ ಶ್ರಮಿಸುತ್ತಿದೆ. ಇಲ್ಲಿ ಶ್ರವಣದೋಷ(Hearing loss), ದೃಷ್ಟಿದೋಷ, ಅಂಗವೈಕಲ್ಯವಿರುವವರನ್ನು ಗುರುತಿಸಿ ಸೌಲಭ್ಯ ನೀಡಲಾಗುತ್ತಿದೆ. ಸ್ವಾವಲಂಬಿಗಳನ್ನಾಗಿ ಮಾಡಲು ಅವರ ಆಸಕ್ತಿಯನ್ನು ಗುರುತಿಸಿ ತರಬೇತಿ ನೀಡಲಾಗುತ್ತದೆ. ದುರ್ಬಲರ ಶೋಷಣೆ ಮಾಡುವುದಲ್ಲ. ಬದಲಾಗಿ ಬದುಕು ಕಟ್ಟಿಕೊಳ್ಳಲು ನೆರವಾಗಬೇಕಿದೆ ಎಂದು ಹೇಳಿದರು.