ಶಿವಮೊಗ್ಗ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಎಸ್.ಎನ್.ಚನ್ನಬಸಪ್ಪ, ಕೆ.ಸಿ.ನಟರಾಜ ಭಾಗವತ್, ಡಾ. ಪಿ.ನಾರಾಯಣ್, ಅನುಪಮಾ, ಪಿ.ಎಂ.ಮಾಲತೇಶ್, ಎ.ಎಸ್.ಕೃಷ್ಣಮೂರ್ತಿ, ಎಚ್.ಉಮೇಶ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಸಕ ಎಸ್.ಎನ್.ಚನ್ನಬಸಪ್ಪ ಅಭಿಮತ
ಜಿಲ್ಲಾಡಳಿತದಿಂದ ಶಂಕರಾಚಾರ್ಯ ಜಯಂತಿ
ಶಿವಮೊಗ್ಗ: ಅದ್ವೆ ತ ತತ್ವದ ಆಧಾರದಲ್ಲಿ ಭರತಖಂಡವನ್ನು ಜೋಡಿಸುವ ಹಾಗೂ ಸನಾತನ ಧರ್ಮ (relgion) ವನ್ನು ಉಳಿಸುವ ನಿಟ್ಟಿನಲ್ಲಿ ಶಂಕರಾಚಾರ್ಯರು (shankaracharya) ಮಾಡಿದ ಕಾರ್ಯ ಸ್ಮರಣೀಯ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ (channabasappa) ಹೇಳಿದರು.
ಜಿಲ್ಲಾಡಳಿತದಿಂದ ಮಂಗಳವಾರ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಶಂಕರಾಚಾರ್ಯ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಪರಬ್ರಹ್ಮನೊಬ್ಬನೇ ಶಾಶ್ವತ ಮತ್ತು ಪರಮ ಸತ್ಯವೆಂದು ಸಾರಿದ ಶಂಕರಾಚಾರ್ಯರು ಈ ದೇಶದ ಸನಾತನ ಹಾಗೂ ಧಾರ್ಮಿಕ ಅಸ್ಮಿತೆ ಉಳಿಸುವುದಕ್ಕಾಗಿಯೇ ದೇಶದ ನಾಲ್ಕು ದಿಕ್ಕಿನಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿದರು. ಅದರ ಪರಿಣಾಮವಾಗಿಯೇ ಇಂದು ದೇಶದಲ್ಲಿ ಧಾರ್ಮಿಕ ಜಾಗೃತಿ ಉಳಿದಿದೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಸಂಸ್ಕೃತ ಉಪನ್ಯಾಸಕ ಎ.ಎಸ್.ಕೃಷ್ಣಮೂರ್ತಿ ಉಪನ್ಯಾಸ ನೀಡಿ, ಶಂಕರಾಚಾರ್ಯರೆಂದರೆ ಆಲಯವಿದ್ದಂತೆ. ಕಲಿಯುಗದಲ್ಲಿ ಜಗತ್ತಿನ ದುಃಖವನ್ನು ಹೋಗಲಾಡಿಸಲು ಪ್ರಮುಖ ಪಾತ್ರವಹಿಸಿದ ಇವರು, ಯಾವುದೇ ಪ್ರತಿಫಲ ಅಪೇಕ್ಷಿಸದೆ ಭಾರತದ ನಾಲ್ಕು ದಿಕ್ಕಿನಲ್ಲಿ ಸಂಚರಿಸಿ ಅವರ ವಿಚಾರಧಾರೆಗಳು ಹಾಗೂ ಜ್ಞಾನವನ್ನು ಹಂಚಿದರು ಎಂದರು.
ಶಂಕರಾಚಾರ್ಯರು ಜಗತ್ತನ್ನು ಕತ್ತಲೆಯಿಂದ ಬೆಳಕಿನೆಡೆಗೆ ತಂದ ಗುರುಗಳು. ಜೀವಾತ್ಮ ಮತ್ತು ಪರಮಾತ್ಮ ಬೇರೆ ಬೇರೆಯಲ್ಲ. ಅಜ್ಞಾನದಿಂದ ನಾವು ನಮ್ಮನ್ನು ದೇಹ, ಮನಸ್ಸು ಎಂದು ಭಾವಿಸುತ್ತೇವೆ. ಆದರೆ ಜ್ಞಾನೋದಯವಾದಾಗ ನಾನೇ ಆ ಬ್ರಹ್ಮ (ಅಹಂ ಬ್ರಹ್ಮಾಸ್ಮಿ) ಎಂಬ ಅರಿವು ಮೂಡುತ್ತದೆ ಎಂಬುದನ್ನು ಶಂಕರಾಚಾರ್ಯರು ಸಾರಿದ್ದಾರೆ. ಅವರು ಶೃಂಗೇರಿ, ಪುರಿ, ದ್ವಾರಕಾ ಮತ್ತು ಬದರಿನಾಥದಲ್ಲಿ ಮಠಗಳನ್ನು ಸ್ಥಾಪಿಸುವ ಮೂಲಕ ಸನಾತನ ಧರ್ಮವನ್ನು ಪುನರುತ್ಥಾನಗೊಳಿಸಿದ್ದರು ಎಂದು ತಿಳಿಸಿದರು.
ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ ಭಾಗವತ್, ತಾಲೂಕು ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಸುರೇಶ್‌ರಾವ್ ನಾಡಿಗ್, ಶಿವಮೊಗ್ಗದ ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ಡಾ.ಪಿ.ನಾರಾಯಣ್, ನಗರ ಪಾಲಿಕೆ ಅಧಿಕಾರಿ ಅನುಪಮಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಮುಂತಾದವರಿದ್ದರು.
"
7ನೇ ಶತಮಾನದಲ್ಲಿ ಕೇರಳದ ಕಾಲಟಿಯಲ್ಲಿ ಜನಿಸಿದ ಶಂಕರಾಚಾರ್ಯರು ಅದ್ವೈತ ತತ್ವದ ಮೂಲಕ ಪರಮಾತ್ಮ ಮತ್ತು ಜೀವಾತ್ಮ ಒಂದೇ ಎಂದು ಜಗತ್ತಿಗೆ ಸಾರಿದರು. ಕೇವಲ 32 ವರ್ಷಗಳ ಅಲ್ಪಾಯುಷ್ಯದಲ್ಲೇ ಇಡೀ ಭಾರತವನ್ನು ಪಾದಯಾತ್ರೆಯ ಮೂಲಕ ಸಂಚರಿಸಿ, ವೇದೋಪನಿಷತ್ತುಗಳಿಗೆ ಭಾಷ್ಯ ಬರೆದ ಮಹಾನ್ ದಾರ್ಶನಿಕ.