ಶುದ್ಧ ನೀರು ಸರಬರಾಜು ಮಾಡದೆ ಜನತೆಗೆ ವಂಚನೆ I pure water

ಶಿವಮೊಗ್ಗದಲ್ಲಿ ಕಲುಷಿತ ನೀರು ಪೂರೈಕೆ ಆಗುತ್ತಿರುವುದನ್ನು ಖಂಡಿಸಿ ಜಯಕರ್ನಾಟಕ ಜನಪರ ವೇದಿಕೆಯ ಬಿ.ಎ.ಸುರೇಶ್ ಶೆಟ್ಟಿ, ತಿಪ್ಪೇಸ್ವಾಮಿ, ನರಸಿಂಹ, ರಘುವೀರ್ ಸಿಂಗ್, ಹುಲುಗಿ ಕೃಷ್ಣ, ಪರಶುರಾಮ್, ಕೃಷ್ಣ, ಬಾಬು, ಮಹೇಶ್ ಮತ್ತಿತರರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಿವಮೊಗ್ಗದಲ್ಲಿ ಕಲುಷಿತ ನೀರು ಪೂರೈಕೆ ಆಗುತ್ತಿರುವುದನ್ನು ಖಂಡಿಸಿ ಜಯಕರ್ನಾಟಕ ಜನಪರ ವೇದಿಕೆಯ ಬಿ.ಎ.ಸುರೇಶ್ ಶೆಟ್ಟಿ, ತಿಪ್ಪೇಸ್ವಾಮಿ, ನರಸಿಂಹ, ರಘುವೀರ್ ಸಿಂಗ್, ಹುಲುಗಿ ಕೃಷ್ಣ, ಪರಶುರಾಮ್, ಕೃಷ್ಣ, ಬಾಬು, ಮಹೇಶ್ ಮತ್ತಿತರರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ನೀರು ಶುದ್ಧೀಕರಣ ಮಾಡಿ ಪೂರೈಸಿ
  • ನಗರಪಾಲಿಕೆ ಆಡಳಿತ ನಿರ್ಲಕ್ಷೃ
  • ಜಯಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ
ಶಿವಮೊಗ್ಗ: ನಗರದ ಬಹುತೇಕ ವಾರ್ಡ್‌ಗಳಿಗೆ ಕಳೆದ ಕೆಲ ದಿನಗಳಿಂದ ಮಣ್ಣು ಮಿಶ್ರಿತ ನೀರು (water) ಪೂರೈಕೆಯಾಗುತ್ತಿದೆ. ಇದರಿಂದ ಜನರ ಆರೋಗ್ಯ (health) ದ ಮೇಲೆ ಗಂಭೀರ ಪರಿಣಾಮ ಉಂಟಾಗುವ ಅಪಾಯವಿದೆ. ಹೀಗಾಗಿ ನೀರು ಶುದ್ಧೀಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಯಕರ್ನಾಟಕ ಜನಪರ ವೇದಿಕೆ ಪ್ರಮುಖರು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ (protest) ನಡೆಸಿದರು.
ಕಲುಷಿತ ನೀರು ಸೇವನೆಯಿಂದ ಕಾಲರಾ, ವಾಂತಿ-ಭೇದಿ ಮತ್ತಿತರ ಕಾಯಿಲೆಗಳಿಗೆ ತುತ್ತಾಗುವ ಅಪಾಯವಿದೆ. ಜಲಮಂಡಳಿ ಮತ್ತು ನಗರ ಪಾಲಿಕೆ 24*7 ಯೋಜನೆ ಹೆಸರಿನಲ್ಲಿ ಜನರನ್ನು ವಂಚಿಸುತ್ತಿವೆ. ಶುದ್ಧ ನೀರು ಪೂರೈಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಲುಷಿತ ನೀರು ಪೂರೈಕೆಗೆ ಕಾರಣರಾದ ಅಧಿಕಾರಿಗಳಿಗೆ ಕೂಡಲೇ ನೋಟಿಸ್ ನೀಡಬೇಕು. ನೀರು ಶುದ್ಧೀಕರಣಕ್ಕೆ ಬಳಸುವ ಆಲಂ ಸರಬರಾಜು ಸರಿಯಾಗಿದೆಯೇ? ಇದರ ಉಪಯೋಗ ನಿಗದಿತ ಪ್ರಮಾಣದಲ್ಲಿ ನಡೆಯುತ್ತಿದೆಯೇ? ಶುದ್ಧೀಕರಣಕ್ಕೆ ಅಯೋಡಿನ್ ಬಳಸಲಾಗುತ್ತಿದೆಯೇ? ಶುದ್ಧೀಕರಣಕ್ಕೆ ಬಳಸುವ ವಸ್ತುಗಳ ಪೂರೈಕೆಗೆ ಟೆಂಡರ್ ಕರೆಯಲಾಗಿದೆಯೇ ಎಂಬ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಅವೈಜ್ಞಾನಿಕವಾಗಿ ನೀರಿನ ಬಿಲ್‌ಗಳನ್ನು ಮನೆಗಳಿಗೆ ಕಳಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಹೊರೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿ ನಾಗರಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಬಿ.ಎ.ಸುರೇಶ್ ಶೆಟ್ಟಿ, ರಾಜ್ಯ ಸಮಿತಿ ಸದಸ್ಯರಾದ ರಘುವೀರ್ ಸಿಂಗ್, ಪ್ರಮುಖರಾದ ಹುಲುಗಿ ಕೃಷ್ಣ, ರಾಜು, ನಾಗರಾಜು, ಮಹೇಶ್, ತಿಪ್ಪೇಸ್ವಾಮಿ, ಇಮ್ರಾನ್, ನವೀನ್, ಪರಶುರಾಮ್, ನರಸಿಂಹ, ಕೃಷ್ಣ, ರಂಗನಾಥ್, ಬಾಬು ಪ್ರತಿಭಟನೆಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net