ಶಿವಮೊಗ್ಗ ತಾಲೂಕಿನ ಗಾಜನೂರಿನ ಡಾ. ಜೆ.ಜೆ.ಕಾರುಣ್ಯಾ 2023ರ ನವೆಂಬರ್‌ನಲ್ಲಿ 10,024 ರೂ. ಪಾವತಿಸಿ ಆನ್‌ಲೈನ್ ಮೂಲಕ ಸ್ಟೆತೋಸ್ಕೋಪ್ ಖರೀದಿ(Purchase) ಮಾಡಿದ್ದರು. ಆದರೆ ಗುಣಮಟ್ಟ ಸರಿ ಇಲ್ಲದ ಕಾರಣ ವಾಪಾಸ್ ಮಾಡಿದ್ದರು. ಆದರೆ ಹಣ ವಾಪಸ್ ನೀಡಿರಲಿಲ್ಲ. ಈ ಬಗ್ಗೆ ಕಾರುಣ್ಯ ಅವರು ಸಲ್ಲಿಸಿದ ದೂರು ದಾಖಲಿಸಿಕೊಂಡ ಆಯೋಗ ಪ್ರಮಾಣಪತ್ರ ಮತ್ತು ದಾಖಲಾತಿ ಪರಿಶೀಲಿಸಿ ಸೇವಾನ್ಯೂನ್ಯತೆ(Inferiority) ಆಗಿದೆ ಎಂದು ತೀರ್ಮಾನಿಸಿ ದೂರನ್ನು ಭಾಗಶಃ ಪುರಸ್ಕರಿಸಿತ್ತು.