ಕೋಕ್ಲಿಯರ್ ಇಪ್ಲಾಂಟ್ ಶಸ್ತ್ರಚಿಕಿತ್ಸೆ ಯಶಸ್ವಿ I implant sugery

ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯಲ್ಲಿ ಮಾರ್ಗದರ್ಶಕರಾಗಿರುವ ಡಾ.ಶಂಕರ್ ಮೆಡಿಕೇರಿ ಅವರನ್ನು ಡಾ.ಎಸ್.ಶ್ರೀಧರ್ ಸನ್ಮಾನಿಸಿದರು. ಡಾ.ಚಂಪಾ, ಡಾ.ಗೀತಾ ಸುಶೀಲ್ ಕುಮಾರ್,  ಶೇಷಮ್ಮ ಇದ್ದರು.
ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯಲ್ಲಿ ಮಾರ್ಗದರ್ಶಕರಾಗಿರುವ ಡಾ.ಶಂಕರ್ ಮೆಡಿಕೇರಿ ಅವರನ್ನು ಡಾ.ಎಸ್.ಶ್ರೀಧರ್ ಸನ್ಮಾನಿಸಿದರು. ಡಾ.ಚಂಪಾ, ಡಾ.ಗೀತಾ ಸುಶೀಲ್ ಕುಮಾರ್, ಶೇಷಮ್ಮ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಯ 25 ಮಕ್ಕಳಿಗೆ ಚಿಕಿತ್ಸೆ
  • ಒಬ್ಬರಿಗೆ ಒಟ್ಟು 7.75 ಲಕ್ಷ ರೂ. ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ
  • ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ.ಎಸ್.ಶ್ರೀಧರ್ ಮಾಹಿತಿ
ಶಿವಮೊಗ್ಗ: ಅತ್ಯಂತ ಗಂಭೀರ ಶ್ರವಣ ಸಮಸ್ಯೆಯುಳ್ಳ ಮಕ್ಕಳು(children) ಎಲ್ಲರಂತೆಯೇ ಸಹಜವಾಗಿ ಆಲಿಸಲು ಅನುಕೂಲವಾಗುವಂತೆ ಸಿಮ್ಸ್ (sims) ಬೋಧನಾ ಆಸ್ಪತ್ರೆ (ಮೆಗ್ಗಾನ್)ಯಲ್ಲಿ ಗುರುವಾರ 25ನೇ ಕೋಕ್ಲಿಯರ್ ಇಪ್ಲಾಂಟ್ (implant) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಯಿತು.
ರಾಜ್ಯ ಸರ್ಕಾರದ ಶ್ರವಣ ಸಂಜೀವಿನಿ ಯೋಜನೆ ಮೂಲಕ 2023ರ ಮಾರ್ಚ್‌ನಲ್ಲಿ ಮೊದಲ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದೀಗ 25ರ ಸಾಧನೆ ಮಾಡಿದ್ದೇವೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಯವರು ಈ 25 ಮಕ್ಕಳ ಪೈಕಿಯಿದ್ದಾರೆ ಎಂದು ಆಸ್ಪತ್ರೆಯ ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ.ಎಸ್.ಶ್ರೀಧರ್ ತಿಳಿಸಿದರು.
ಗುರುವಾರ 25ನೇ ಶಸ್ತ್ರಚಿಕಿತ್ಸೆ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಟ್ಟು ಕಿವುಡು ಇರುವ ಮಕ್ಕಳಿಗೆ ನಡೆಸುವ ಉನ್ನತ ಮಟ್ಟದ ಮತ್ತು ಸಂಕೀರ್ಣವಾದ ಶಸ್ತಚಿಕಿತ್ಸೆ ಇದಾಗಿದೆ. ಬಿಪಿಎಲ್ ಹಾಗೂ ಎಪಿಎಲ್ ಎಂಬ ವರ್ಗೀಕರಣ ಮಾಡದೇ ಎಲ್ಲ ಅರ್ಹ ಮಕ್ಕಳಿಗೂ ಈ ಶಸ್ತ್ರಚಿಕಿತ್ಸೆ ಲಭ್ಯವಿದೆ ಎಂದು ಹೇಳಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಈ ಶಸ್ತ್ರಚಿಕಿತ್ಸೆಯ ಒಟ್ಟು ವೆಚ್ಚ ಸುಮಾರು 15 ಲಕ್ಷ ರೂ. ಮೆಗ್ಗಾನ್ ಆಸ್ಪತ್ರೆಯಲ್ಲಿ ಶ್ರವಣ ಸಂಜೀವಿನಿ ಯೋಜನೆ ಮೂಲಕ ಉಚಿತವಾಗಿ ಮಾಡಲಾಗುತ್ತದೆ. ಇಂಪ್ಲಾಂಟ್ ಸಾಧನದ ವೆಚ್ಚಕ್ಕಾಗಿ 6 ಲಕ್ಷ ರೂ. ಶಸ್ತ್ರಚಿಕಿತ್ಸೆ ಮತ್ತು ನಂತರದ ಪುನರ್ವಸತಿ 1.75 ಲಕ್ಷ ರೂ. ಸೇರಿದಂತೆ ಒಟ್ಟು 7.75 ಲಕ್ಷ ರೂ. ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ ಎಂದು ತಿಳಿಸಿದರು.
ಶಸ್ತಚಿಕಿತ್ಸೆ ನಂತರ ಎಲ್ಲ 25 ಮಕ್ಕಳನ್ನು ಮೈಸೂರಿನ ಎಐಐಎಸ್ ಸಂಸ್ಥೆಗೆ ಆಡಟರಿ ವರ್ಬಲ್ ಥೆರಪಿಗಾಗಿ ರೆಫರ್ ಮಾಡಲಾಗಿದೆ. ಚಿಕಿತ್ಸೆ ನಂತರ ಹೆಚ್ಚಿನ ಮಕ್ಕಳಲ್ಲಿ ಕೇಳುವ ಸಾಮರ್ಥ್ಯ ಮತ್ತು ಮಾತಿನ ಕೌಶಲಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಶಸ್ತ್ರಚಿಕಿತ್ಸೆಯಲ್ಲಿ ಮಾರ್ಗದರ್ಶಕರಾಗಿರುವ ತಜ್ಞ ವೈದ್ಯಡಾ.ಶಂಕರ್ ಮೆಡಿಕೇರಿ, ಜಿಲ್ಲಾ ಸರ್ಜನ್ ಡಾ.ಗೀತಾ ಸುಶೀಲ್
ಕುಮಾರ್, ಅನಸ್ತೇಶಿಯಾ ವಿಭಾಗದ ಡಾ.ಚಂಪಾ, ಶುಶ್ರೂಷಕಾಧೀಕ್ಷಕಿ ಶೇಷಮ್ಮ ಸುದ್ದಿಗೋಷ್ಠಿಯಲ್ಲಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾದ ಮಗುವಿನ ತಾಯಿಯೊಬ್ಬರು ಈಗ ತಮ್ಮ ಮಗು ಉತ್ತಮವಾಗಿ ಜೀವನ ನಡೆಸುತ್ತಿರುವ ಬಗ್ಗೆ ಅನುಭವ ವ್ಯಕ್ತಪಡಿಸಿದರು.


ನಾಲ್ಕು ಜಿಲ್ಲೆಗೆ ಮೆಗ್ಗಾನ್

ಮೆಗ್ಗಾನ್ ಆಸ್ಪತ್ರೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಗಂಭೀರ ಶ್ರವಣ ಸಮಸ್ಯೆಯುಳ್ಳ ಮಕ್ಕಳಿಗೆ ಕೋಕ್ಲಿಯರ್ ಇಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಇದೊಂದು ಸಂಕೀರ್ಣ ಚಿಕಿತ್ಸೆ. ಇದುವರೆಗೆ ಎಲ್ಲ 25 ಶಸ್ತ್ರಚಿಕಿತ್ಸೆಗಳನ್ನು ಡಾ.ಶಂಕರ್ ಮೆಡಿಕೇರಿ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಇಎನ್‌ಟಿ ವಿಭಾಗದ ಸಿಬ್ಬಂದಿ, ಆಸ್ಪತ್ರೆಯ ಆಡಳಿತ ವರ್ಗದ ಸಹಕಾರ ಹಾಗೂ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ ಎಂದು ಡಾ.ಎಸ್.ಶ್ರೀಧರ್ ಹೇಳಿದರು.

ವಿವಿಧ ಹಂತಗಳು

ಮಕ್ಕಳಲ್ಲಿ ಗಂಭೀರದಿಂದ ಅತ್ಯಂತ ಗಂಭೀರವಾದ ಶ್ರವಣ ಸಮಸ್ಯೆಯನ್ನು ಬೇಗ ಗುರುತಿಸಬೇಕು. ಚಿಕಿತ್ಸೆ ಅಗತ್ಯವುಳ್ಳ ಮಕ್ಕಳಿಗೆ ಮೊದಲು ಹಿಯರಿಂಗ್ ಸಲಕರಣೆ ಮೂಲಕ ಟ್ರಯಲ್ ಥೆರಪಿ ನೀಡಲಾಗುವುದು. ಅಗತ್ಯವಿದ್ದರೆ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಬಳಿಕ ಎರಡು ವರ್ಷ ಆಡಿಟರಿ ವರ್ಬಲ್ ಥೆರಪಿ ಮೂಲಕ ಪುನರ್ವಸತಿ ನೀಡಲಾಗುತ್ತದೆ. ಆರೋಗ್ಯ ಕೇಂದ್ರಗಳು, ಎನ್‌ಐಸಿಯು, ಎಸ್‌ಎನ್‌ಸಿಯು, ಮಕ್ಕಳ ಆಸ್ಪತ್ರೆಗಳು ಹಾಗೂ ಸಮುದಾಯ ಮಟ್ಟದಲ್ಲಿ ಆಶಾ, ಎಎನ್‌ಎಂ, ಆರ್‌ಬಿಎಸ್‌ಕೆ ಹಾಗೂ ಎನ್‌ಪಿಪಿಸಿಡಿ ತಂಡಗಳು ಶ್ರವಣ ತಪಾಸಣೆ ನಡೆಸಲಿವೆ. ಆಗ ಸಮಸ್ಯೆ ಕಂಡುಬಂದ ಮಕ್ಕಳನ್ನು ಜಿಲ್ಲಾ ಮಟ್ಟದ ಜಿಲ್ಲಾ ಕೋಕ್ಲಿಯರ್ ಇಂಪ್ಲಾಂಟ್ ಕಮಿಟಿಗೆ ರೆಫರ್ ಮಾಡಲಾಗುತ್ತದೆ. ಇಲ್ಲಿಂದ ಕಳಿಸಲಾಗುವ ಪ್ರಸ್ತಾವನೆಗೆ ರಾಜ್ಯ ಮಟ್ಟದ ಸಮಿತಿ ಅನುಮೋದನೆ ನೀಡಿದ ಬಳಿಕ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂದು ಡಾ.ಎಸ್.ಶ್ರೀಧರ್ ತಿಳಿಸಿದರು.


ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಯಾರು ಅರ್ಹರು?

ರಾಜ್ಯದ ನಿವಾಸಿಗಳಾಗಿರುವ ಹಾಗೂ ಎರಡೂ ಕಿವಿಗಳಲ್ಲಿ ಗಂಭೀರವಾದ ಕಿವುಡು ಇರುವ ಮಕ್ಕಳು.
ಸಾಮಾನ್ಯವಾಗಿ 8 ತಿಂಗಳಿನಿಂದ ಎರಡು ವರ್ಷದ ಮಕ್ಕಳನ್ನು ಹೆಚ್ಚಾಗಿ ಶಸ್ತ್ರಚಿಕಿತ್ಸೆಗೆ ಪರಿಗಣಿಸಲಾಗುತ್ತದೆ.
ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನ ಕನಿಷ್ಠ ಮೂರು ತಿಂಗಳು ಹಿಯರಿಂಗ್ ಏಡ್ ಥೆರಪಿ ಪಡೆದಿರಬೇಕು
ಎವಿ ಥೆರಪಿಯ ಕನಿಷ್ಠ 30 ಸೆಷನ್‌ಗಳಲ್ಲಿ ಭಾಗವಹಿಸಿರುವುದಕ್ಕೆ ದಾಖಲೆ ಇರಬೇಕು.
ಸಿಟಿ ಮತ್ತು ಎಂಆರ್‌ಐ ಪರೀಕ್ಷೆಗಳಲ್ಲಿ ಕೋಕ್ಲಿಯಾ ಹಾಗೂ ಶ್ರವಣ ನರಗಳು ಶಸ್ತ್ರಚಿಕಿತ್ಸೆಗೆ ಅನುಕೂಲಕರ ಅಂಶಗಳಿರಬೇಕು.
ಐಕ್ಯು ಮಟ್ಟ 80ಕ್ಕಿಂತ ಹೆಚ್ಚಿರಬೇಕು. ಮಗು ಸ್ಪೀಚ್ ಪ್ರೊಸೆಸರ್‌ನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿರಬೇಕು.
ಶಸ್ತಚಿಕಿತ್ಸೆಗೆ ಮೊದಲು ಮಕ್ಕಳತಜ್ಞರು ಮತ್ತು ಅರಿವಳಿಕೆ ತಜ್ಞರಿಂದ ವೈದ್ಯಕೀಯ ಅನುಮತಿ ಪಡೆಯಬೇಕು.
"

ಮೊದಲಿಗೆ 1ರಿಂದ 6 ವರ್ಷದೊಳಗಿನ ಮಕ್ಕಳಿಗೆ ಕೋಕ್ಲಿಯರ್ ಇಂಪ್ಲಾಂಟ್ ಶಸಚಿಕಿತ್ಸೆ ನಡೆಸಲಾಗುತ್ತಿತ್ತು. ಈಗ ಎರಡು ವರ್ಷದೊಳಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಮಕ್ಕಳ ಭವಿಷ್ಯಕ್ಕೆ ಈ ಶಸ್ತಚಿಕಿತ್ಸೆ ಅತ್ಯುತ್ತಮ. ಈ ವ್ಯವಸ್ಥೆಗೆ ಒಳಗಾದ ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net