ಗಾಂಧೀಜಿ ಮಾತು ಪಾಲಿಸುತ್ತಿರುವ ಸಿಎಂ, ಡಿಸಿಎಂ; ಈಶ್ವರಪ್ಪ ಲೇವಡಿ | K.S.Eshwarappa

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ
Published on

ಪ್ರಮುಖ ಮುಖ್ಯಾಂಶಗಳು

  • ಸಿಎಂ ಖುರ್ಚಿಗೆ ಕಿತ್ತಾಟ ಮುಂದುವರಿದರೆ ಕರ್ನಾಟಕ ಕಳೆದುಕೊಳ್ಳಲಿದೆ ಕಾಂಗ್ರೆಸ್
  • ಕರ್ನಾಟಕದಲ್ಲಿ ಎರಡೂವರೆ ವರ್ಷಗಳಿಂದ ಅಭಿವೃದ್ಧಿಯ ಪ್ರಶ್ನೆಯೇ ಇಲ್ಲ
  • 125 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಬಿಹಾರ ಚುನಾವಣೆಯಲ್ಲಿ ಧೂಳಿಪಟ
ಶಿವಮೊಗ್ಗ: ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್(congress)ಪಕ್ಷವನ್ನು ವಿಸರ್ಜನೆ ಮಾಡಬೇಕೆಂದು ಅಂದೇ ಹೇಳಿದ್ದರು. ಅವರ ಮಾತುಗಳನ್ನು ಇಂದು ಸಿಎಂ ಸಿದ್ದರಾಮಯ್ಯ(Siddaramaiah) ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್(D.K. Sivakumar) ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಭೂಪಟದಲ್ಲಿ ಕಾಂಗ್ರೆಸ್ ಕರ್ನಾಟಕ ಮತ್ತು ತೆಲಂಗಾಣ(Telangana)ರಾಜ್ಯಗಳಲ್ಲಿ ಮಾತ್ರ ಉಳಿದಿದೆ. ಸಿಎಂ(cm) ಖುರ್ಚಿಗಾಗಿ ಇದೇ ರೀತಿ ಕಿತ್ತಾಟ ಮುಂದುವರಿದರೆ ಕರ್ನಾಟಕ(karnataka)ವನ್ನೂ ಕಾಂಗ್ರೆಸ್ ಕಳೆದುಕೊಳ್ಳಲಿದೆ ಎಂದು ಎಚ್ಚರಿಸಿದರು.
ಕರ್ನಾಟಕದಲ್ಲಿ ಎರಡೂವರೆ ವರ್ಷಗಳಿಂದ ಅಭಿವೃದ್ಧಿಯ ಪ್ರಶ್ನೆಯೇ ಇಲ್ಲ. ಶಾಸಕರು, ಸಚಿವರು ಕೂಡ ಸಿಎಂ ಬಳಿ ತಮ್ಮ ಕ್ಷೇತ್ರಗಳಲ್ಲಿನ ರಸ್ತೆಗಳ ದುರಸ್ತಿಗೆ ಜಲ್ಲಿ ಕೇಳುವ ಧೈರ್ಯವೂ ಇಲ್ಲ. ಹಾಗಾಗಿ ಈ ಸರ್ಕಾರ ಆದಷ್ಟು ಬೇಗ ಬಿದ್ದು ಹೋಗಲಿದೆ. ಹಾಲಿ ಕರ್ನಾಟಕ ಒಳಗೊಂಡು ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಅಸ್ಥಿತ್ವವನ್ನು ಉಳಿಸಿಕೊಂಡಿದೆ. 125 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಬಿಹಾರ ಚುನಾವಣೆಯಲ್ಲಿ ಧೂಳಿಪಟವಾಗಿದ್ದು, ಸಿಂಗಲ್ ಡಿಜಿಟ್‌ಗೆ ತಲುಪಿರುವುದು ಖೇದಕರ ಎಂದರು.
ಪಶ್ಚಿಮ ಬಂಗಾಳ ಮತ್ತು ಬಿಹಾರ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದೆ. ಪಶ್ಚಿಮ ಬಂಗಾಳದಲ್ಲಿ ಮತಕಳ್ಳತನ ಆರೋಪ ಮಾಡಿದ್ದ ಕಾಂಗ್ರೆಸ್‌ಗೆ ಮತದಾರರು ತಕ್ಕ ಉತ್ತರವನ್ನೇ ಕೊಟ್ಟರು. ಬಿಹಾರದಲ್ಲೂ ಕೂಡ ದೊಡ್ಡ ಪೆಟ್ಟು ನೀಡಿದರು ಎಂದರು.

ಭಗವದ್ಗೀತೆಗೆ ಮಡಿತನವೇ ಇಲ್ಲ

ಭಗವದ್ಗೀತೆ(bhagavad gita)ಗೆ ಮಡಿತನ ಎಂಬುದಿಲ್ಲ. ರಾಮ, ಕೃಷ್ಣ ಒಳಗೊಂಡಂತೆ ಎಲ್ಲರೂ ಬಂದು ಸೇರಿಕೊಳ್ಳಬಹುದು. ವಿರೋಧಿಗಳು ಒಮ್ಮೆ ಭಗವದ್ಗೀತೆ ಅಧ್ಯಯನ ಮಾಡಿದರೆ ಎಲ್ಲ ಗೊಂದಲಗಳಿಗೂ ತೆರೆ ಬೀಳಲಿದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ಹಿಂದು ವಿಚಾರ ಬಂದಾಕ್ಷಣ ಕೆಲವರು ಟೀಕೆ ಮಾಡುವುದನ್ನೇ ಗುರಿಯನ್ನಾಗಿಸಿಕೊಂಡಿದ್ದಾರೆ. ಇದು ಒಳ್ಳೆಯ ವ್ಯವಸ್ಥೆಯಲ್ಲ. ವಿರೋಧಿಗಲಿದ್ದರೆ ಭಗವದ್ಗೀತೆ ಬಗ್ಗೆ ಚರ್ಚೆಗೆ ಬರಬೇಕು. ಆನಂತರ ತಮ್ಮ ತಪ್ಪಿನ ಅರಿವಾದರೆ ತಿದ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net