ಯುವ ಮೋರ್ಚಾದಿಂದ ಬೈಕ್ ರ‍್ಯಾಲಿ

ಸೊರಬ ಬಿಜೆಪಿ ಯುವ ಮೋರ್ಚಾದಿಂದ ಸ್ವಾತಂತ್ರೃ ದಿನದ ಅಂಗವಾಗಿ ಏರ್ಪಡಿಸಿದ್ದ ತಿರಂಗ ಯಾತ್ರೆ ಬೈಕ್ ರ‍್ಯಾಲಿ.
ಸೊರಬ ಬಿಜೆಪಿ ಯುವ ಮೋರ್ಚಾದಿಂದ ಸ್ವಾತಂತ್ರೃ ದಿನದ ಅಂಗವಾಗಿ ಏರ್ಪಡಿಸಿದ್ದ ತಿರಂಗ ಯಾತ್ರೆ ಬೈಕ್ ರ‍್ಯಾಲಿ.
Published on
ಸೊರಬ: ಸ್ವಾತಂತ್ರೃ ದಿನದ ಅಂಗವಾಗಿ ಬಿಜೆಪಿ ಯುವ ಮೋರ್ಚಾದಿಂದ ಪಟ್ಟಣದಲ್ಲಿ ತಿರಂಗ ಯಾತ್ರೆ ಬೈಕ್ ರ‍್ಯಾಲಿ ನಡೆಸಲಾಯಿತು.
ಬಿಜೆಪಿ ಮುಖಂಡ ಡಾ. ಎಚ್.ಇ.ಜ್ಞಾನೇಶ್ ಮಾತನಾಡಿ, ದೇಶಾಭಿಮಾನ ಮತ್ತು ದೇಶಭಕ್ತಿಯಿಂದ ಎಲ್ಲರೂ ಒಂದಾಗಿ ದೇಶ ಕಟ್ಟೋಣ ಎಂದರು. ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಡಾ. ರಾಜು ಎಂ. ತಲ್ಲೂರು ಮಾತನಾಡಿ, ಪ್ರತಿಯೊಬ್ಬರೂ ಮನೆಗಳ ಮೇಲೆ ತಿರಂಗ ಧ್ವಜ ಹಾರಿಸಬೇಕು ಎಂದು ತಿಳಿಸಿದರು.
ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದಿಂದ ಆರಂಭವಾದ ಬೈಕ್ ರ‌್ಯಾಲಿ ಬಿಜೆಪಿ ಕಚೇರಿವರೆಗೆ ಸಾಗಿತು. ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ರಾಜು, ತಾಲೂಕು ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಪಾಣಿ ರಾಜಪ್ಪ, ಶಿವಕುಮಾರ, ಜಾನಕಪ್ಪ ಒಡೆಯರ್, ಗುರುಪ್ರಸನ್ನ ಗೌಡ, ಭಾಗ್ಯಾ, ದೇವೇಂದ್ರಪ್ಪ, ಮಧುಕೇಶ್, ಹೊಳೆಯಮ್ಮ, ಸಂಜಯ ಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net