ಬೈಕ್ ಅಪಘಾತ, ಸ್ಥಳದಲ್ಲೇ ಸವಾರ ಸಾವು । Bike accident

ಬೈರಾಪುರ ಗ್ರಾಮದ ಸಮೀಪದ ಅಪಘಾತದಲ್ಲಿ ಸಂಪೂರ್ಣ ನಜ್ಜುಗುಜ್ಜಾಗಿರುವ ಬೈಕ್.
ಬೈರಾಪುರ ಗ್ರಾಮದ ಸಮೀಪದ ಅಪಘಾತದಲ್ಲಿ ಸಂಪೂರ್ಣ ನಜ್ಜುಗುಜ್ಜಾಗಿರುವ ಬೈಕ್.
Published on
ಶಿವಮೊಗ್ಗ: ಸಾಗರ ತಾಲೂಕಿನ ಗೌತಮಪುರ ಸಮೀಪದ ಬೈರಾಪುರ ಗ್ರಾಮದಲ್ಲಿ ಭೀಕರ ಅಪಘಾತ(accident)ದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೋಟೆಕೊಪ್ಪ ಗ್ರಾಮದ ರಮೇಶ್ (55) ಮೃತರು. 
ರಮೇಶ್ ಅವರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮಾಹಿತಿ ಫಲಕಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆನಂದಪುರ ಠಾಣೆಯ ಪಿಎಸ್‌ಐ(psi)ಎಸ್.ಪಿ.ಪ್ರವೀಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೈಕ್(Bike) ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮಾಹಿತಿ ಫಲಕ(Information board) ಕೂಡ ಹಾನಿಗೀಡಾಗಿದೆ. ಆನಂದಪುರ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net