ಬೈಕ್‌ ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಸಾವು । Bike accident

ಮೃತ ಸವಾರ ಕೌಶಿಕ್
ಮೃತ ಸವಾರ ಕೌಶಿಕ್
Published on

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗ ಮತ್ತು ಸಂತೇಕಡೂರು ನಡುವೆ ಎರಡು ಬೈಕ್‌ಗಳ ಅಪಘಾತ
  • ಸಂತೇಕಡೂರಿನ ಕೌಶಿಕ್ ಮೃತ ಸವಾರ
  • ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಶಿವಮೊಗ್ಗ: ಶಿವಮೊಗ್ಗ ಮತ್ತು ಸಂತೇಕಡೂರು(Santekadur) ನಡುವೆ ಎರಡು ಬೈಕ್‌ಗಳ ಅಪಘಾತ(Bike accident)ದಲ್ಲಿ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರಿಗೆ ಕಾಲು ಮುರಿದಿದೆ. ಇನ್ನೊಬ್ಬ ಹಿಂಬದಿ ಸವಾರನೂ ಗಾಯಗೊಂಡಿದ್ದಾನೆ.
ಸಂತೇಕಡೂರಿನ ಕೌಶಿಕ್(20) ಮೃತ ಸವಾರ. ಯೋಗೇಶ್ ಮತ್ತು ಪ್ರೇಮನಾಥ್ ಎಂಬುವರು ಗಾಯಗೊಂಡಿದ್ದಾರೆ. ಸಂತೇಕಡೂರಿನ ಕೌಶಿಕ್ ಮತ್ತು ಯೋಗೇಶ್ ಬುಧವಾರ ಮಧ್ಯಾಹ್ನ ಬುಲೆಟ್ ಬೈಕ್‌(Bullet bike)ನಲ್ಲಿ ಪ್ರೇಮನಾಥ್ ಎಂಬುವರು ಸ್ಲ್ಪೆಂಡರ್ ಬೈಕ್‌(Slender bike)ನಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದರು. ಪ್ರೇಮನಾಥ್ ಅವರು ಮುಂದೆ ಸಾಗುತ್ತಿದ್ದು, ಏಕಾಏಕಿ ಬಲಕ್ಕೆ ತಿರುವು ಪಡೆದಿದ್ದರು. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಬುಲೆಟ್ ಪ್ರೇಮನಾಥ್ ಅವರ ಬೈಕ್‌ಗೆ ಡಿಕ್ಕಿ ಹೊಡೆದಿತ್ತು.
ಗಂಭೀರವಾಗಿ ಗಾಯಗೊಂಡಿದ್ದ ಬುಲೆಟ್ ಚಲಾಯಿಸುತ್ತಿದ್ದ ಕೌಶಿಕ್(Koushik) ಸ್ಥಳದಲ್ಲೇ ಮೃತಪಟ್ಟರೆ, ಹಿಂಬದಿ ಕುಳಿತಿದ್ದ ಯೋಗೇಶ್ ಕೂಡ ಗಾಯಗೊಂಡಿದ್ದಾನೆ. ಪ್ರೇಮನಾಥ್ ಅವರ ಕಾಲು ಮುರಿದಿದ್ದು, ಅವರ ಸ್ಥಿತಿಯೂ ಗಂಭೀರವಾಗಿದೆ. ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net