ಹಣೆ ಮೇಲೆ ಭಸ್ಮ, ಕೊರಳಲ್ಲಿ ಲಿಂಗವಿರಬೇಕು. ನಾವು ಅವ್ಯವಹಾರ ಮಾರ್ಗದಲ್ಲಿ ಹೋಗದಂತೆ ತಡೆಯುವ ಶಕ್ತಿ ಭಸ್ಮ ಮತ್ತು ಲಿಂಗಕ್ಕಿದೆ. ಅವು ಕೇವಲ ಧಾರ್ಮಿಕ ಆಚರಣೆ(Religious practice)ಯಲ್ಲ. ನಮ್ಮನ್ನು ರಕ್ಷಣೆ ಮಾಡುವ ಪ್ರಮುಖ ಅಸ್ತ್ರಗಳು. ಗುರು, ಲಿಂಗ, ಜಂಗಮರಲ್ಲಿ ಭಕ್ತಿ ಇದ್ದವರೇ ನಿಜವಾದ ಶ್ರೀಮಂತರು. ಮೂವರಲ್ಲಿ ಯಾರಿಗೂ ಭಕ್ತಿ ಇಲ್ಲವೋ ಅವರೇಲ್ಲರೂ ಧರಿದ್ರರು ಎಂದ ಶ್ರೀಗಳು, ಹಣ, ಅಂತಸ್ತು ಇರುವವರು ಶ್ರೀಮಂತರಲ್ಲ. ಲಿಂಗಧಾರಣೆ ಮಾಡಿದವರು ನಿಜವಾದ ಶ್ರೀಮಂತರು ಎಂದರು.