ಸಾಲದ ಸದ್ಭಳಕೆಯಿಂದ ಆರ್ಥಿಕ ಸಶಕ್ತರಾಗಿ

ಹೊಳೆಹೊನ್ನೂರು ಸಮೀಪದ ಆಗರದಹಳ್ಳಿಯಲ್ಲಿ ಆಯೋಜಿಸಿದ್ದ ಮನೆ ಅಲಂಕಾರಿಕ ವಸ್ತುಗಳ ತರಬೇತಿ ಶಿಬಿರವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಹನುಮಂತು ಉದ್ಘಾಟಿಸಿದರು. ಅಜಯ್‌ಕುಮಾರ್, ಸೌಮ್ಯಾ, ದೇವರಾಜ್ ಇತರರಿದ್ದರು.
ಹೊಳೆಹೊನ್ನೂರು ಸಮೀಪದ ಆಗರದಹಳ್ಳಿಯಲ್ಲಿ ಆಯೋಜಿಸಿದ್ದ ಮನೆ ಅಲಂಕಾರಿಕ ವಸ್ತುಗಳ ತರಬೇತಿ ಶಿಬಿರವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಹನುಮಂತು ಉದ್ಘಾಟಿಸಿದರು. ಅಜಯ್‌ಕುಮಾರ್, ಸೌಮ್ಯಾ, ದೇವರಾಜ್ ಇತರರಿದ್ದರು.
Published on
ಹೊಳೆಹೊನ್ನೂರು: ಮಹಿಳೆಯರು ಸ್ವಸಹಾಯ ಸಂಘದ ಸಾಲವನ್ನು ಸದುದ್ದೇಶಕ್ಕೆ ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಹನುಮಂತು ಹೇಳಿದರು.
ಆಗರದಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದ ಸೃಜನಶೀಲ ಕಾರ್ಯಕ್ರಮದಡಿ ಸದಸ್ಯರಿಗೆ ಮನೆ ಅಲಂಕಾರಿಕ ವಸ್ತುಗಳ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ಕಿರು ಉದ್ಯಮಗಳು ಭವಿಷ್ಯದಲ್ಲಿ ಆದಾಯವನ್ನು ದ್ವಿಗುಣವಾಗಿಸುತ್ತವೆ. ಕರಕುಶಲ ತರಬೇತಿ ಪಡೆದ ಮಹಿಳೆಯರು ಆರ್ಥಿಕವಾಗಿ ಸಶಕ್ತರಾದರೆ ಕುಟುಂಬಗಳು ಏಳಿಗೆಯಾಗುತ್ತವೆ. ನಿಗದಿತ ಉದ್ದೇಶಕ್ಕೆ ಮಾತ್ರ ಸಾಲಗಳನ್ನು ಪಡೆದರೆ ಲಾಭವಾಗುತ್ತದೆ. ತರಬೇತಿ ಪಡೆದ ಮಹಿಳೆಯರು ಸ್ಥಳೀಯವಾಗಿ ಸಣ್ಣ ಉದ್ಯಮಗಳನ್ನು ಆರಂಭಿಸಬೇಕು ಎಂದು ತಿಳಿಸಿದರು.
ತಾಲೂಕು ಸಂಯೋಜನಾಧಿಕಾರಿ ಅಜಯ್‌ಕುಮಾರ್, ಒಕ್ಕೂಟದ ಅಧ್ಯಕ್ಷೆ ರತ್ನಮ್ಮ, ರೂಪಾ, ಮಣಿ, ದೇವರಾಜ್, ಸೌಮ್ಯಾ, ಸುನೀತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net