ಆತಂಕ ಸೃಷ್ಟಿ: ಭಾನುವಾರವಷ್ಟೇ ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯ(Bhadra dam)ದ ಬಳಿ ಮುಖ್ಯ ರಸ್ತೆಯಲ್ಲೇ ಕರಡಿ ಕಾಣಿಸಿಕೊಂಡಿತ್ತು. ಅಲ್ಲಿಂದ ಮುತ್ತೋಡು, ಕೆಸವೆ, ಕಾಚಿನಕಟ್ಟೆ ಮಾರ್ಗವಾಗಿ ಜ್ಯೋತಿನಗರಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿತ್ತು. ಉಂಬ್ಳೆಬೈಲ್‌ನ ಅರಣ್ಯ ಇಲಾಖೆ ಸಿಬ್ಬಂದಿ ಕರಡಿ ಸೆರೆ ಹಿಡಿದು ಜನರಲ್ಲಿದ್ದ ಆತಂಕ ದೂರು ಮಾಡಿದರು.