ಬ್ಯಾಡ್ಮಿಂಟನ್​ ಕ್ರೀಡೆಗೆ ಪ್ರೋತ್ಸಾಹ ಅಗತ್ಯ

ಸೊರಬ ಬಿಜೆಪಿ ಕಚೇರಿಯಲ್ಲಿ ಸೊರಬ ಬ್ಯಾಡ್ಮಿಂಟನ್​ ಅಸೋಸಿಯೇಷನ್​ನಿಂದ ಕುಮಾರ್​ ಬಂಗಾರಪ್ಪ ಅವರನ್ನು ಸನ್ಮಾನಿಸಲಾಯಿತು. ಸೈಯದ್​ ಅಕಿಲ್​, ಎಂ.ಪಿ.ರಾವೇಂದ್ರ, ಮಹಮ್ಮದ್​ ಯಾಸೀನ್​ ಇತರರಿದ್ದರು.
ಸೊರಬ ಬಿಜೆಪಿ ಕಚೇರಿಯಲ್ಲಿ ಸೊರಬ ಬ್ಯಾಡ್ಮಿಂಟನ್​ ಅಸೋಸಿಯೇಷನ್​ನಿಂದ ಕುಮಾರ್​ ಬಂಗಾರಪ್ಪ ಅವರನ್ನು ಸನ್ಮಾನಿಸಲಾಯಿತು. ಸೈಯದ್​ ಅಕಿಲ್​, ಎಂ.ಪಿ.ರಾವೇಂದ್ರ, ಮಹಮ್ಮದ್​ ಯಾಸೀನ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಕಚೇರಿಯಲ್ಲಿ ಸನ್ಮಾನ
  • ಬ್ಯಾಡ್ಮಿಂಟನ್ ಅಸೋಸಿಯೇಷನ್​ ಅಧ್ಯಕ್ಷ ಕುಮಾರ್​ ಬಂಗಾರಪ್ಪ ಹೇಳಿಕೆ
  • ಬ್ಯಾಡ್ಮಿಂಟನ್​ ಕ್ರೀಡೆಗೆ ಪ್ರೋತ್ಸಾಹ ಅಗತ್ಯ
ಸೊರಬ: ಗ್ರಾಮೀಣ ಪ್ರದೇಶಗಳಲ್ಲಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟ ಮಾತ್ರವಲ್ಲದೆ ಒಲಿಂಪಿಕ್ಸ್​ನಲ್ಲಿ ಪ್ರತಿನಿಧಿಸುವಂತಹ ಅನೇಕ ಪ್ರತಿಭೆಗಳಿದ್ದಾರೆ. ರಾಜ್ಯದಲ್ಲಿ ಬ್ಯಾಡ್ಮಿಂಟನ್​ ಇನ್ನಷ್ಟು ಎತ್ತರಕ್ಕೇರಲಿ ಎಂಬ ಉದ್ದೇಶ ಹೊಂದಲಾಗಿದೆ ಎಂದು ಕರ್ನಾಟಕ ಬ್ಯಾಡ್ಮಿಂಟನ್​ ಅಸೋಸಿಯೇಷನ್​ ಅಧ್ಯಕ್ಷ ಎಸ್​.ಕುಮಾರ್​ ಬಂಗಾರಪ್ಪ ಹೇಳಿದರು.
ಪಟ್ಟಣದ ಖಾಸಗಿ ಬಸ್​ ನಿಲ್ದಾಣ ಸಮೀಪದ ಬಿಜೆಪಿ ಕಚೇರಿಯಲ್ಲಿ ಸೊರಬ ಬ್ಯಾಡ್ಮಿಂಟನ್​ ಅಸೋಸಿಯೇಷನ್​ನಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬ್ಯಾಡ್ಮಿಂಟನ್​ ಕ್ರೀಡೆ ಅಭಿವೃದ್ಧಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕರ್ನಾಟಕ ಬ್ಯಾಡ್ಮಿಂಟನ್​ ಅಸೋಸಿಯೇಷನ್​ ಕಳೆದ ಏಳು ದಶಕಗಳಿಂದ ಸಾವಿರಾರು ಪ್ರತಿಭಾವಂತ ಆಟಗಾರರನ್ನು ರೂಪಿಸಿದೆ. ಪದ್ಮಶ್ರೀ ಪ್ರಕಾಶ್​ ಪಡುಕೋಣೆ, ಲ$್ಯಸೇನ್​ ಸೇರಿದಂತೆ ಅನೇಕ ಶ್ರೇಷ್ಠ ಆಟಗಾರರು ಇದಕ್ಕೆ ಸಾಯಾಗಿದ್ದಾರೆ ಎಂದರು.
ಯುವ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಅತ್ಯಾಧುನಿಕ ಮೂಲ ಸೌಕರ್ಯ, ವೈಾನಿಕ ತರಬೇತಿ ಮತ್ತು ಸಮಗ್ರ ಬೆಂಬಲ ಅಗತ್ಯ. ತರಬೇತಿ ಕೇಂದ್ರಗಳ ಸ್ಥಾಪನೆ, ಜತೆಗೆ ಜಿಲ್ಲೆ ಮತ್ತು ಗ್ರಾಮೀಣ ಪ್ರದೇಶಗಳ ಪ್ರತಿಭೆಗಳ ಉತ್ತೇಜನಕ್ಕೆ ಸರ್ಕಾರದ ಸಹಕಾರ ನೀಡಬೇಕು. ಪಟ್ಟಣದ ಖಾಸಗಿ ಬಸ್​ ನಿಲ್ದಾಣ ಮೇಲ್ಭಾಗದಲ್ಲಿ ಕ್ರೀಡಾಂಗಣ ನಿರ್ಮಿಸಲಾಗಿತ್ತು. ಅದಕ್ಕೆ ನೆಲ ಹಾಸು ಮಾಡಬೇಕಿದೆ. ಈ ಬಗ್ಗೆ ಸರ್ಕಾರ ಗಮನ ನೀಡಬೇಕು. ತಾಲೂಕಿನ ಬ್ಯಾಡ್ಮಿಂಟನ್​ ಆಟಗಾರರು ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸೊರಬ ತಾಲೂಕು ಬ್ಯಾಡ್ಮಿಂಟನ್​ ಅಸೋಸಿಯೇಷನ್​ ಅಧ್ಯ ಸೈಯದ್​ ಅಕಿಲ್​, ಕಾರ್ಯದರ್ಶಿ ಎಂ.ಪಿ.ರಾವೇಂದ್ರ, ಮಹಮ್ಮದ್​ ಯಾಸೀನ್​, ಮಹಮ್ಮದ್​ ಸಫಾನ್​, ಮುಹಮ್ಮದ್​ ಆಸ್​ೀ, ಅಬ್ದುಲ್​ ಗಫಾರ್​, ಸೈಯದ್​ ಶಫೀರ್​ ಮುಂತಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net