ಶಿವಮೊಗ್ಗ: ನಗರದ ರೈಲ್ವೆ ನಿಲ್ದಾಣ(Railway station)ದಿಂದ ಕಾಶಿಪುರಕ್ಕೆ ಪ್ರೀ-ಪೇಯ್ಡ್(Pre-paid
) ಆಟೋ ಸೇವೆ ಬಳಸಿದ್ದ ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚುವರಿ ಹಣಕ್ಕೆ ಬೇಡಿಕೆ ಇರಿಸಿ ಅನುಚಿತವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಆಟೋ ಚಾಲಕನ ವಿರುದ್ಧ ಶಿವಮೊಗ್ಗ ಸಂಚಾರ ಪೊಲೀಸರು(Traffic Police)ಕ್ರಮ ಕೈಗೊಂಡಿದ್ದಾರೆ.
ಶುಕ್ರವಾರ ರಾತ್ರಿ ನಗರದ ರೈಲ್ವೆ ನಿಲ್ದಾಣದಿಂದ ಕಾಶಿಪುರಕ್ಕೆ ಪ್ರಯಾಣಿಸಲು ಪ್ರಯಾಣಿಕರೊಬ್ಬರು ಪ್ರೀ-ಪೇಯ್ಡ ಆಟೋ ಟಿಕೆಟ್(Pre-paid auto ticket) ಪಡೆದಿದ್ದರು. ಪ್ರೀ-ಪೇಯ್ಡ್ ವ್ಯವಸ್ಥೆಯಡಿ ಪ್ರಯಾಣಕ್ಕೆ ನಿಗದಿಪಡಿಸಿದ್ದ ದರ ಪಾವತಿಸಿ ಪ್ರಯಾಣ ಆರಂಭಿಸಿದ್ದರೂ ಸಂಬಂಧಿಸಿದ ಆಟೋ ಚಾಲಕ ಟಿಕೆಟ್‌ನಲ್ಲಿ ನಿಗದಿಯಾಗಿದ್ದ ಮೊತ್ತಕ್ಕಿಂತ ಹೆಚ್ಚುವರಿಯಾಗಿ 40 ರೂ. ನೀಡುವಂತೆ ಪ್ರಯಾಣಿಕರನ್ನು ಒತ್ತಾಯಿಸಿದ್ದ.
ಅಲ್ಲದೆ, ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಈ ಬಗ್ಗೆ ಪ್ರಯಾಣಿಕರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಸಂಚಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆಟೋವನ್ನು ಜಪ್ತಿ ಮಾಡಿರುವ ಪೊಲೀಸರು, ಚಾಲಕನ ವಿರುದ್ಧ ಮೋಟಾರು ವಾಹನ ಕಾಯ್ದೆ(Motor Vehicle Act)ಯನ್ವಯ ಪ್ರಕರಣ ದಾಖಲಿಸಿದ್ದಾರೆ.