ಕೇಂದ್ರದಿಂದ ಮಹಿಳೆಯರಿಗೆ ವಿಫುಲ ಅವಕಾಶ । Mahila jagruti samavesha

ಶಿವಮೊಗ್ಗ ಬಂಟರ ಭವನದಲ್ಲಿ ಮಹಿಳಾ ಜಾಗೃತಿ ಸಮವೇಶ ನಡೆಯಿತು. ಬಿ.ವೈ.ರಾಘವೇಂದ್ರ, ಮಾಳವಿಕಾ ಅವಿನಾಶ್, ಸಿ.ಮಂಜುಳಾ, ಎಸ್.ಎನ್.ಚನ್ನಬಸಪ್ಪ, ಎಸ್.ದತ್ತಾತ್ರಿ, ಕೆ.ಬಿ.ಅಶೋಕನಾಯ್ಕ, ಕೆ.ಜಿ.ಕುಮಾರಸ್ವಾಮಿ, ಮಧುರಾ ಶಿವಾನಂದ, ಎನ್.ಕೆ.ಜಗದೀಶ್, ಗಾಯತ್ರಿ ಮಲ್ಲಪ್ಪ, ಶಾಂತಾ ಸುರೇಂದ್ರ, ಸುರೇಖಾ ಮುರುಳೀಧರ್ ಇದ್ದರು.
ಶಿವಮೊಗ್ಗ ಬಂಟರ ಭವನದಲ್ಲಿ ಮಹಿಳಾ ಜಾಗೃತಿ ಸಮವೇಶ ನಡೆಯಿತು. ಬಿ.ವೈ.ರಾಘವೇಂದ್ರ, ಮಾಳವಿಕಾ ಅವಿನಾಶ್, ಸಿ.ಮಂಜುಳಾ, ಎಸ್.ಎನ್.ಚನ್ನಬಸಪ್ಪ, ಎಸ್.ದತ್ತಾತ್ರಿ, ಕೆ.ಬಿ.ಅಶೋಕನಾಯ್ಕ, ಕೆ.ಜಿ.ಕುಮಾರಸ್ವಾಮಿ, ಮಧುರಾ ಶಿವಾನಂದ, ಎನ್.ಕೆ.ಜಗದೀಶ್, ಗಾಯತ್ರಿ ಮಲ್ಲಪ್ಪ, ಶಾಂತಾ ಸುರೇಂದ್ರ, ಸುರೇಖಾ ಮುರುಳೀಧರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಾಸ್ಟೆಲ್‌ಗಳು ಹೆಚ್ಚಿದ್ದರೂ ಹೆಣ್ಣುಮಕ್ಕಳಿಗೆ ಸೀಟು ಸಿಗುತ್ತಿಲ್ಲ
  • ಬಂಟರ ಭವನದಲ್ಲಿ ಮಹಿಳಾ ಜಾಗೃತಿ ಸಮಾವೇಶ
  • ಬಿಜೆಪಿ ರಾಜ್ಯ ವಕ್ತಾರೆ ಮಾಳವಿಕಾ ಅವಿನಾಶ್ ಅಭಿಪ್ರಾಯ
ಶಿವಮೊಗ್ಗ: ಕೇಂದ್ರ ಸರ್ಕಾರ ಬಜೆಟ್‌(Budget)ನಲ್ಲಿ ಘೋಷಿಸಿರುವ ಪ್ರತಿ ಜಿಲ್ಲೆಗೊಂದು ಹಾಸ್ಟೆಲ್ ಮತ್ತು ಶೀ ಮಾರ್ಟ್‌(She Mart)ಗಳು ದೇಶದಲ್ಲಿನ ಮಹಿಳಾ ಸಬಲೀಕರಣಕ್ಕೆ ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಮಾಳವಿಕಾ ಅವಿನಾಶ್ ಹೇಳಿದರು.
ನಗರದ ಬಂಟರ ಭವನದಲ್ಲಿ ಶನಿವಾರ ಕೇಂದ್ರದ ನಾರಿ ಶಕ್ತಿ(Narishakti) ಬಜೆಟ್ ಅಂಗವಾಗಿ ಬಿಜೆಪಿಯಿಂದ ಆಯೋಜಿಸಿದ್ದ ಮಹಿಳಾ ಜಾಗೃತಿ ಸಮಾವೇಶ(Mahila jagruti samavesha)ದಲ್ಲಿ ಮಾತನಾಡಿದ ಅವರು, ಪ್ರಸ್ತುತ ವಿದ್ಯಮಾನಗಳ ಬಗ್ಗೆ ಹೆಚ್ಚು ವಿಮರ್ಶೆಗಳಲ್ಲಿ ಪಾಲ್ಗೊಳ್ಳಬೇಕು. ಹೆಣ್ಣು ಮಕ್ಕಳು ಹೆಚ್ಚೆಚ್ಚು ಸ್ವಾವಲಂಬಿಗಳಾಗಲು ಶೀ ಮಾರ್ಟ್ ಮತ್ತು ಹಾಸ್ಟೆಲ್ಗಳು ಪೂರಕ ಎಂದರು.
ಹೆಣ್ಣುಮಕ್ಕಳು ಅಡುಗೆ ಮನೆಗೆ ಸೀಮಿತ. ಅವರಿಗೆ ವ್ಯವಹಾರಿಕ ಜ್ಞಾನ ಕಡಿಮೆ ಮತ್ತು ಮಾರ್ಕೆಟಿಂಗ್(Marketing) ಬರಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಇದೀಗ ಕೇಂದ್ರ ಸರ್ಕಾರ ಶೀ ಮಾರ್ಟ್‌ಗಳ ಮೂಲಕ ಮಾರ್ಕೆಟಿಂಗ್ ಮಾಡುವುದಕ್ಕೆ  ಅವಕಾಶಗಳನ್ನು ಕಲ್ಪಿಸುತ್ತಿದೆ. ಇದು ನಮ್ಮನ್ನು ನಾವು ಜಗತ್ತಿಗೆ ಪ್ರಸ್ತುತಪಡಿಸಿಕೊಳ್ಳುವುದಕ್ಕೆ ದಾರಿದೀಪ ಎಂದು ಹೇಳಿದರು.
ಹಿಂದೆಲ್ಲಾ ಶಿಕ್ಷಣ, ಕೆಲಸ ಸೇರಿ ಹೊರಗಡೆ ಹೋಗುವುದಕ್ಕೆ ಆಗುತ್ತಿರಲಿಲ್ಲ. ನಗರಗಳಲ್ಲಿದ್ದುಕೊಂಡು ಸ್ವಾವಲಂಬಿ ಜೀವನ ನಡೆಸುವುದು ಕಷ್ಟವಾಗಿತ್ತು. ಶೈಕ್ಷಣಿಕವಾಗಿಯೂ ಕಷ್ಟದ ದಿನಗಳನ್ನು ಎದುರಿಸುತ್ತಿದ್ದರು. ಇಂದು ಹಾಸ್ಟೆಲ್‌(Hostel)ಗಳ ಪ್ರಮಾಣ ಹೆಚ್ಚಿದ್ದರೂ ಬಹಳಷ್ಟು ಹೆಣ್ಣುಮಕ್ಕಳಿಗೆ ಸೀಟು ಸಿಗುತ್ತಿಲ್ಲ. ಅಂತಹವರಿಗೆ ನೆರವಾಗಲು ಕೇಂದ್ರ ಸರ್ಕಾರ ಜಿಲ್ಲೆಗೊಂದು ಮಹಿಳಾ ಹಾಸ್ಟೆಲ್ ತೆರೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ.ಮಂಜುಳಾ, ಮಹಿಳಾ ಕಾರ್ಯಕರ್ತೆಯರಿಗೆ, ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ನಾರಿ ಶಕ್ತಿಯ ಬಗ್ಗೆ ಜಾಗೃತಿ ಮೂಡಿಸುವುದೇ ಸಮಾವೇಶದ ಉದ್ದೇಶ. ಪಿಎಂ ಸ್ವ ಉದ್ಯೋಗಗಳ ಮೂಲಕ ಸಾಲ ಪಡೆದವರು ಸ್ವಂತ ಉದ್ದಿಮೆಗಳನ್ನು ತೆರೆದು ಲಾಭದಾಯಕ ಜೀವನ ನಡೆಸುತ್ತಿದ್ದಾರೆ. ಬ್ಯಾಂಕ್‌ಗಳು ನಾರಿಯರಿಗೆ ಸಾಲ ಕೊಡಲು ಮನೆ ಬಾಗಿಲಿಗೆ ಬರುತ್ತಿವೆ. ಬಜೆಟ್ ಎನ್ನುವುದು ಅಂಕಿ ಸಂಖ್ಯೆಯ ಆಟವಲ್ಲ. ಮುಖ್ಯವಾಗಿ ಮಹಿಳೆಯರನ್ನು ಆರ್ಥಿಕವಾಗಿ ಸದೃಢ ಮಾಡುವುದಾಗಿದೆ ಎಂದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸಮಾವೇಶ ಉದ್ಘಾಟಿಸಿದರು. ಮಾಜಿ ಸಚಿವ ಹರತಾಳು ಹಾಲಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್ಸಿ ಡಿ.ಎಸ್.ಅರುಣ್, ಮಾಜಿ ಶಾಸಕರಾದ ಕೆ.ಬಿ.ಅಶೋಕ ನಾಯ್ಕ, ಕೆ.ಜಿ.ಕುಮಾರಸ್ವಾಮಿ, ಪ್ರಕೋಷ್ಠಗಳ ಸಂಚಾಲಕ ಎಸ್.ದತ್ತಾತ್ರಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಧುರಾ ಶಿವಾನಂದ, ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು, ಗಾಯತ್ರಿ ಮಲ್ಲಪ್ಪ, ಶಾಂತಾ ಸುರೇಂದ್ರ, ಸುರೇಖಾ ಮುರುಳೀಧರ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net