ಸಂಸ್ಕೃತ ಭಾಷಣದಲ್ಲಿ ಆದಿತ್ಯಾನಂದ ಶೆಣೈ ಪ್ರಥಮ I sanskrit speach

ರಾಜ್ಯ ಮಟ್ಟದ ಸಂಸ್ಕೃತ ಭಾಷಣ ಸ್ಪರ್ಧೆ ವಿಜೇತರಾದ ಆದಿತ್ಯಾನಂದ, ಧ್ರುವ ಮೆಹ್ತಾ, ಎಸ್.ವಿ.ಮಂಜುನಾಥ ಪ್ರಸಾದ್, ಜಿ.ಎ.ಹೃಷಿಕೇಷ, ಕೌಶಿಕ್ ಲಾಯೆಕ್ ಮತ್ತಿತರಿಗೆ ಬಹುಮಾನ ವಿತರಿಸಲಾಯಿತು. ಲಕ್ಷ್ಮೀನಾರಾಯಣ, ಅ.ನಾ.ವಿಜಯೇಂದ್ರ ರಾವ್, ಟಿ.ವಿ.ನರಸಿಂಹಮೂರ್ತಿ ಇತರರಿದ್ದರು.
ರಾಜ್ಯ ಮಟ್ಟದ ಸಂಸ್ಕೃತ ಭಾಷಣ ಸ್ಪರ್ಧೆ ವಿಜೇತರಾದ ಆದಿತ್ಯಾನಂದ, ಧ್ರುವ ಮೆಹ್ತಾ, ಎಸ್.ವಿ.ಮಂಜುನಾಥ ಪ್ರಸಾದ್, ಜಿ.ಎ.ಹೃಷಿಕೇಷ, ಕೌಶಿಕ್ ಲಾಯೆಕ್ ಮತ್ತಿತರಿಗೆ ಬಹುಮಾನ ವಿತರಿಸಲಾಯಿತು. ಲಕ್ಷ್ಮೀನಾರಾಯಣ, ಅ.ನಾ.ವಿಜಯೇಂದ್ರ ರಾವ್, ಟಿ.ವಿ.ನರಸಿಂಹಮೂರ್ತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗದಲ್ಲಿ 36ನೇ ರಾಜ್ಯ ಮಟ್ಟದ ಸ್ಪರ್ಧೆ
  • ಸಂಸ್ಕೃತ ಭಾರತಿ, ತರುಣೋದಯ ಸಂಸ್ಥೆ ಆಯೋಜನೆ
ಶಿವಮೊಗ್ಗ: ನಗರದ ಸಂಸ್ಕೃತ ಭಾರತಿ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಆಶ್ರಯದಲ್ಲಿ ಬಿ.ಬಿ. ರಸ್ತೆಯ ಸಂಸ್ಕೃತ ಭವನದಲ್ಲಿ ಏರ್ಪಡಿಸಿದ್ದ 36ನೇ ರಾಜ್ಯ ಮಟ್ಟದ ಸಂಸ್ಕೃತ (sanskrit) ಭಾಷಣ (speach) ಸ್ಪರ್ಧೆಯಲ್ಲಿ ಗೋಕರ್ಣದ (gokarna) ಮೇಧಾ ದಕ್ಷಿಣಾಮೂರ್ತಿ ವೇದ ಭವನ ಸರ್ಕಾರಿ ಮಹಾವಿದ್ಯಾಲಯ ವಿದ್ಯಾರ್ಥಿ ಆದಿತ್ಯಾನಂದ ಶೆಣೈ ಪ್ರಥಮ ಸ್ಥಾನ ಪಡೆದರು.
ಆದಿಚುಂಚನಗಿರಿ ಕ್ಷೇತ್ರದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸ್ಮರಣಾರ್ಥ ನೀಡಲಾಗುವ ಪುರಸ್ಕಾರ ಇದಾಗಿದ್ದು, ಪ್ರಸ್ತುತ ವಿದ್ಯಮಾನದಲ್ಲಿ ವಿದುರ ನೀತಿಯ ಪ್ರಾಸಂಗಿಕತೆ ಎಂಬ ವಿಚಾರವಾಗಿ ಸಂಸ್ಕೃತದಲ್ಲಿ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.
ಶೃಂಗೇರಿ ಭಾರತಿ ಶಾಸ್ತ್ರ ಸಂಸ್ಕೃತ ಕೇಂದ್ರಂನ ವಿದ್ಯಾರ್ಥಿ ಧ್ರುವ ಮೆಹ್ತಾ ಎರಡನೇ ಸ್ಥಾನ ಪಡೆದು ಸೀತಮ್ಮ ಹಾಗೂ ವೆಂಕಟರಮಣ ಉಪಾಧ್ಯ ಸ್ಮರಣಾರ್ಥ ನೀಡುತ್ತಿರುವ ಪುರಸ್ಕಾರ ತಮ್ಮದಾಗಿಸಿಕೊಂಡರು.
ಹರಿಹರಪುರ ಚಿತ್ರಕೂಟ ಪ್ರಬೋಧಿನಿ ಗುರುಕುಲಂ ವಿದ್ಯಾರ್ಥಿ ಎಸ್.ವಿ.ಮಂಜುನಾಥ ಪ್ರಸಾದ್ ತೃತೀಯ ಸ್ಥಾನ ಪಡೆದು ಅ.ನಾ.ಮಾಧವ ರಾವ್ ಪುರಸ್ಕಾರಕ್ಕೆ ಭಾಜನರಾದರು. ಸೋಂದಾ ಭಾವಿ ಸಮೀರ ಗುರುಕುಲದ ವಿದ್ಯಾರ್ಥಿ ಜಿ.ಎ.ಹೃಷಿಕೇಷ ನಾಲ್ಕನೇ ಸ್ಥಾನ ಪಡೆದು ಕರಂಬಳ್ಳಿ ಕೃಷ್ಣಶೆಟ್ಟಿ ಪ್ರಾಯೋಜಕತ್ವದ ಪುರಸ್ಕಾರಕ್ಕೆ ಪಾತ್ರರಾದರು.
ಗೋಕರ್ಣ ಮೇಧಾ ದಕ್ಷಿಣಾಮೂರ್ತಿ ವೇದ ಭವನ ಸರ್ಕಾರಿ ಮಹಾವಿದ್ಯಾಲಯದ ಕೌಶಿಕ್ ಲಾಯೆಕ್ ಅವರಿಗೆ ವಾಗ್ದೇವಿ ಹಾಗೂ ಮಧುಕರ ಜೋಯ್ಸ ಪ್ರಾಯೋಜಕತ್ವದ ಬಹುಮಾನ, ಉಮಚಗಿ ಶ್ರೀಮಾತಾ ಸಂಸ್ಕೃತ ಮಹಾ ಪಾಠಶಾಲೆಯ ವಿದ್ಯಾರ್ಥಿ ಲೋಹಿತ್ ವಿನಾಯಕ ಭಟ್ಟ ಅವರಿಗೆ ಡಾ. ಭೀಮೇಶ್ವರ ಜೋಶಿ ಪ್ರಾಯೋಜಕತ್ವದ ಪುರಸ್ಕಾರ ಲಭಿಸಿದೆ.
ಸಂಸ್ಕೃತ ಭಾರತಿ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತ ಸಂಘಟನಾ ಮಂತ್ರಿ ಭುವನಕೋಟೆ ಲಕ್ಷ್ಮೀನಾರಾಯಣ, ಸಂಸ್ಕೃತ ಭಾರತಿ ಶಿವಮೊಗ್ಗ ಜಿಲ್ಲಾಧ್ಯಕ್ಷ ಎನ್.ವಿ.ಶಂಕರನಾರಾಯಣ, ಜಿಲ್ಲಾ ಸಂಯೋಜಕ ಟಿ.ವಿ.ನರಸಿಂಹಮೂರ್ತಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್, ಎನ್.ಎಸ್.ರವೀಂದ್ರ, ಸಾಗರದ ಸಂಸ್ಕೃತ ಭಾರತಿ ಅಧ್ಯಕ್ಷ ಬಸವರಾಜ ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಬೆಂಗಳೂರಿನ ಡಾ. ಶ್ರುತಿ ಕಾನಿಟ್ಕರ್, ಡಾ. ಭಾಸ್ಕರ್ ಜೋಶಿ ಭಟ್, ಶಿವಮೊಗ್ಗದ ಮಹೀಪತಿ ಜೋಯ್ಸ ಪಾಲ್ಗೊಂಡಿದ್ದರು. ದೀಪಿಕಾ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net