ಗಾಂಧಿ ಪಾರ್ಕ್‌ನ ಸೌಕರ್ಯಗಳ ಸುಧಾರಣೆಗೆ ಕ್ರಮ | Gandhi Park

ಶಿವಮೊಗ್ಗದ ಗಾಂಧಿ ಪಾರ್ಕ್‌ನಲ್ಲಿ ಮೂಲ ಸೌಕರ್ಯ ಕಲ್ಪಿಸಲು ಶಾಸಕ ಎಸ್.ಎನ್.ಚನ್ನಬಸಪ್ಪ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಎಸ್.ಜ್ಞಾನೇಶ್ವರ್, ಪ್ರಭಾಕರ್ ಇದ್ದರು.
ಶಿವಮೊಗ್ಗದ ಗಾಂಧಿ ಪಾರ್ಕ್‌ನಲ್ಲಿ ಮೂಲ ಸೌಕರ್ಯ ಕಲ್ಪಿಸಲು ಶಾಸಕ ಎಸ್.ಎನ್.ಚನ್ನಬಸಪ್ಪ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಎಸ್.ಜ್ಞಾನೇಶ್ವರ್, ಪ್ರಭಾಕರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅರ್ಧಕ್ಕೆ ನಿಂತ, ದುರಸ್ತಿ ಆಗಬೇಕಿರುವ ಕಾಮಗಾರಿ ಪರಿಶೀಲನೆ
  • ತಾಂತ್ರಿಕ ಕಾರಣಗಳಿಂದ ನಿಂತ ಮಕ್ಕಳ ರೈಲನ್ನು ದುರಸ್ತಿಗೊಳಿಸಿ
  • ಪಾಲಿಕೆ ಅಧಿಕಾರಿಗಳಿಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಸೂಚನೆ
ಶಿವಮೊಗ್ಗ: ನಗರದ ಪ್ರಮುಖ ಆಕರ್ಷಣೀಯ ತಾಣವಾದ ಗಾಂಧಿ ಪಾರ್ಕ್‌(Gandhi Park)ನ ಮೂಲ ಸೌಕರ್ಯಗಳ ಸುಧಾರಣೆಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಶಾಸಕ ಎಸ್.ಎನ್.ಚನ್ನಬಸಪ್ಪ(MLA S.N.Channabasappa

) ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಗಾಂಧಿ ಪಾರ್ಕ್‌ಗೆ ಶನಿವಾರ ಬೆಳಗ್ಗೆ ಭೇಟಿ ನೀಡಿ ಮೂಲ ಸೌಕರ್ಯ(Infrastructure) ಪರಿಶೀಲಿಸಿದ ಅವರು, ಪಾರ್ಕ್‌ನಲ್ಲಿ ಹಲವು ದಿನಗಳಿಂದ ಅರ್ಧಕ್ಕೆ ನಿಂತಿರುವ ಹಾಗೂ ದುರಸ್ತಿ ಆಗಬೇಕಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಅರ್ಧಕ್ಕೆ ಸ್ಥಗಿತಗೊಂಡಿರುವ ಫೌಂಟೆನ್ ಕಾಮಗಾರಿ(Fountain works)ಯನ್ನು ತಕ್ಷಣ ಪೂರ್ಣಗೊಳಿಸಿ ಪಾರ್ಕ್‌ನ ಸೌಂದರ್ಯ ಹೆಚ್ಚಿಸಬೇಕು.  ಪಾರ್ಕ್‌ಗೆ ಬರುವ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಕುಡಿಯುವ ನೀರಿನ ಅಭಾವವಾಗದಂತೆ ಸುಲಭವಾಗಿ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ಸೂಚಿಸಿದರು. 
ಕ್ರೀಡಾ ಇಲಾಖೆ(Sports Department) ಸಹಯೋಗದಲ್ಲಿ ಈಜುಕೊಳವನ್ನು ಸಾರ್ವಜನಿಕರ ಸದ್ಬಳಕೆಗೆ ತರಲು ಸೂಕ್ತ ಕ್ರಮ ಕೈಗೊಳ್ಳಬೇಕು. ತಾಂತ್ರಿಕ ಕಾರಣಗಳಿಂದ ನಿಂತಿರುವ ಪ್ರಸಿದ್ಧ ಮಕ್ಕಳ ರೈಲನ್ನು ದುರಸ್ತಿಗೊಳಿಸಿ ಹಾಗೂ ಹಾಳಾಗಿರುವ ಆಟಿಕೆಗಳನ್ನು ಬದಲಾಯಿಸಿ ಮಕ್ಕಳಿಗೆ ಅನುಕೂಲ ಒದಗಿಸಬೇಕು ಎಂದರು.
ಈಗಾಗಲೇ ನಿರ್ಮಿಸಲಾಗಿರುವ ಮಳಿಗೆಗಳನ್ನು ಸಾರ್ವಜನಿಕರಿಗೆ ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಬೇಕು. ಪಾರ್ಕ್ ಒಳಗಿರುವ ಕೊಳವನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಬೇಕು. ಪಾರ್ಕ್‌ನ ಸರ್ವಾಂಗೀಣ ನವೀಕರಣ(Comprehensive renovation) ಹಾಗೂ ಸ್ವಚ್ಛತೆ ನಿರ್ವಹಣೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸದೆ ಕಾಲಮಿತಿಯೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣ ಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಸ್.ಜ್ಞಾನೇಶ್ವರ್, ಪಾಲಿಕೆ ಮಾಜಿ ಕಾರ್ಪೊರೇಟರ್ ಪ್ರಭಾಕರ್, ಪಾಲಿಕೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net