ಅಡುಗೆ ಅನಿಲ ಸಮರ್ಪಕ ಪೂರೈಕೆ ಹಾಗೂ ಕೆಎ್ಡಿ ಕುರಿತು ಸಾಗರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದರು. ವೀರೇಶ್ಕುಮಾರ್, ಡಾ. ಶ್ರೀನಿವಾಸ್, ಡಾ. ಕಿರಣ್ ಮುಂತಾದವರಿದ್ದರು.
ಸಾಗರ: ಎಸ್ಮಾ ಜಾರಿಯಾಗಿದ್ದು ಅಕ್ರಮವಾಗಿ ಗ್ಯಾಸ್ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಶನಿವಾರ ಅಡುಗೆ ಅನಿಲ ಸಮರ್ಪಕ ಪೂರೈಕೆ, ಕಾರ್ಗಲ್ ಭಾಗದಲ್ಲಿ ವ್ಯಾಪಿಸಿರುವ ವಾಂತಿಭೇದಿ ಹಾಗೂ ಕೆಎ್ಡಿ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದರು.
ಸಾಗರದಲ್ಲಿ ಅಡುಗೆ ಅನಿಲಕ್ಕೆ ಯಾವುದೇ ಕೊರತೆ ಇಲ್ಲ. ಸಾರ್ವಜನಿಕರು ಅನಗತ್ಯ ಗಾಬರಿಯಾಗಿ ಮುಂಗಡ ಬುಕ್ಕಿಂಗ್ ಮಾಡಬೇಡಿ. ಹೋಟೆಲ್ ಮತ್ತು ಕಲ್ಯಾಣ ಮಂಟಪಗಳಲ್ಲಿ ವಾಣಿಜ್ಯ ಬಳಕೆ ಅಡುಗೆ ಅನಿಲದ ಕೊರತೆ ಬಗ್ಗೆ ಸಣ್ಣಪುಟ್ಟ ಚರ್ಚೆ ನಡೆಯುತ್ತಿದೆ. ಕಲ್ಯಾಣ ಮಂಟಪಗಳಲ್ಲಿ ಮದುವೆ ಹೆಚ್ಚು ಬುಕ್ ಆಗಿರುವುದರಿಂದ ಅಲ್ಲಿ ಯಾವುದೇ ರೀತಿ ಸಮಸ್ಯೆ ಆಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತುರ್ತು ಇರುವ ಕಡೆಗಳಲ್ಲಿ ಹೋಟೆಲ್ಗಳಿಗೂ ವಾಣಿಜ್ಯ ಸಿಲಿಂಡರ್ ಪೂರೈಕೆ ಮಾಡಲಾಗುತ್ತದೆ ಎಂದರು.
ಕಾರ್ಗಲ್ ಭಾಗದಲ್ಲಿ ಕೆಲವು ವಾಂತಿಭೇದಿ ಪ್ರಕರಣ ದಾಖಲಾಗಿದೆ. ಅದು ಕಾಲರಾ ಎಂಬ ಚರ್ಚೆ ಇತ್ತು. ಆದರೆ ವರದಿಯಲ್ಲಿ ಕಾಲರಾ ಅಲ್ಲ ಎನ್ನುವ ಮಾಹಿತಿ ಬಂದಿದೆ. ಇತ್ತೀಚೆಗೆ ನಡೆದ ಜಾತ್ರೆಯಲ್ಲಿ ಐಸ್ಕ್ರೀಂ, ಪಾನಿಪುರಿ, ಇನ್ನಿತರ ಸೇವನೆಯಿಂದ ಸೋಂಕು ಹರಡಿರಬಹುದು ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಿ ಜಾತ್ರೆ ನಡೆದರೂ ಸೂಕ್ತ ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೇಸಿಗೆ ಪ್ರಾರಂಭವಾಗಿರುವುದರಿಂದ ಕೆಎ್ಡಿ ಕುರಿತು ಅಗತ್ಯ ಮುಂಜಾಗ್ರತೆ ವಹಿಸಲು ಶಾಸಕರು ಸೂಚಿಸಿದರು.
ಉಪವಿಭಾಗಾಧಿಕಾರಿ ವೀರೇಶ್ಕುಮಾರ್, ಡಾ. ಶ್ರೀನಿವಾಸ್, ಡಾ. ಕಿರಣ್, ಡಾ. ನಾಗರಾಜ್, ಡಾ. ಹರ್ಷವರ್ಧನ್, ಟಿ.ಪಿ.ರಮೇಶ್, ಅನಿಲ್, ಶ್ರೀನಿವಾಸ್ ಮುಂತಾದವರಿದ್ದರು.
ಹೋಟೆಲ್ಗಳಲ್ಲಿ ಮನೆಗೆ ಬಳಸುವ ಅಡುಗೆ ಅನಿಲ ಉಪಯೋಗಿಸಿದರೆ ಕ್ರಮ ಜರುಗಿಸಲಾಗುತ್ತದೆ. ಅಡುಗೆ ಅನಿಲ ಕೊಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಸಿರಿಯಲ್ ನಂಬರ್ಗಳನ್ನು ದಾಖಲಿಸಬೇಕು. ಯಾರೂ ಕೃತಕ ಅಭಾವ ಸೃಷ್ಟಿಸುವ ಪ್ರಯತ್ನ ಮಾಡಬೇಡಿ.