ಭಾನುವಾರ ರಾತ್ರಿ ತರೀಕೆರೆ ತಾಲೂಕು ಬರಗೇನಹಳ್ಳಿ ಗೌಳಿ ಕ್ಯಾಂಪ್‌ಗೆ ತೆರಳುವಾಗ ಎಚ್.ಕೆ.ಜಂಕ್ಷನ್ ಬಳಿ ಮೆಕ್ಕೆಜೋಳ(Maize) ಲೋಡ್ ಆಗಿದ್ದ ಲಾರಿ ಮುಂದೆ ಚಲಿಸಲಾಗದೆ ಚಾಲಕನ ನಿಯಂತ್ರಣ ಕಳೆದುಕೊಂಡು ಹಿಮ್ಮುಖವಾಗಿ ಬರುತ್ತಿತ್ತು. ಏಕಾಏಕಿ ಲಾರಿ ಬೈಕ್ ಮೇಲೆ ಹತ್ತಿದ್ದರಿಂದ ಬಾಬು ಅವರು ಸ್ಥಳದಲ್ಲೇ ಮೃತಪಟ್ಟರೆ, ಸಾವಿತ್ರಿ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.