ಬ್ಯಾಂಕ್ ಕೆವೈಸಿ ನೆಪದಲ್ಲಿ 6.50 ಲಕ್ಷ ರೂ. ವಂಚನೆ । Online fraud
ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆ
Published on:
Copied
Follow Us
ಶಿವಮೊಗ್ಗ: ಬ್ಯಾಂಕ್ ಕೆವೈಸಿ(KYC) ಅಪ್‌ಡೇಟ್ ಮಾಡುವ ನೆಪದಲ್ಲಿ ಅಪರಿಚಿತರು ಕಳುಹಿಸಿದ ಲಿಂಕ್(Link) ಹಾಗೂ ಎಪಿಕೆ ಫೈಲ್(Apk file) ಡೌನ್‌ಲೋಡ್ ಮಾಡಿದ ವ್ಯಕ್ತಿ 6.50 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಎಸ್‌ಬಿಐ(Sbi) ಖಾತೆ ಅಪ್‌ಡೇಟ್ ಮಾಡುವಂತೆ ಮೊಬೈಲ್‌ಗೆ ಮೆಸೇಜ್ ಬಂದಿತ್ತು. ಅದನ್ನು ನಂಬಿದ ಅವರು ಫೈಲ್ ಡೌನ್‌ಲೋಡ್(Download) ಮಾಡಿ ಮಾಹಿತಿ ಭರ್ತಿ ಮಾಡಿದ್ದರು.
ಮೊದಲು 50 ಸಾವಿರ ರೂ., ನಂತರ ಎರಡು ಬಾರಿ ತಲಾ 2 ಲಕ್ಷ ರೂ. ಹಾಗೂ ಒಮ್ಮೆ 1 ಲಕ್ಷ ರೂ. ಕಡಿತವಾಗಿದೆ. ಮೊಬೈಲ್ ಮೆಸೇಜ್ ಬಂದಾಗ ವಂಚನೆ ಬೆಳಕಿಗೆ ಬಂದಿದೆ. ಸಿಇಎನ್(CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.