ಲಾಭಾಂಶದ ಆಮಿಷವೊಡ್ಡಿ 61 ಲಕ್ಷ ರೂ. ವಂಚನೆ । Online Fraud

ಶಿವಮೊಗ್ಗ ಸಿಇಎನ್ ಠಾಣೆ
ಶಿವಮೊಗ್ಗ ಸಿಇಎನ್ ಠಾಣೆ
Published on
ಶಿವಮೊಗ್ಗ: ಷೇರು ಮಾರುಕಟ್ಟೆ(Stock market) ಮತ್ತು ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ ಸೈಬರ್ ವಂಚಕರು(Cyber ​​fraudsters) ವ್ಯಕ್ತಿಯೊಬ್ಬರಿಗೆ 61ಲಕ್ಷ ರೂ. ವಂಚಿಸಿದ್ದಾರೆ. 
ಖಾಸಗಿ ಕಂಪನಿ(Private company)ಯ ಹೆಸರಿನಲ್ಲಿ ನಕಲಿ ಜಾಲ ಸೃಷ್ಟಿಸಿ ಬೃಹತ್ ಮೊತ್ತದ ಹಣ ಲೂಟಿ ಮಾಡಲಾಗಿದೆ. ಅಪರಿಚಿತ ವ್ಯಕ್ತಿಗಳು ಒಂದು ಕಂಪನಿಯ ಪ್ರತಿನಿಧಿಗಳಂತೆ ನಟಿಸಿ ಸಂಪರ್ಕಿಸಿದ್ದಾರೆ. ತಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ, ಚಿನ್ನ(Gold) ಮತ್ತು ಷೇರು ಮಾರುಕಟ್ಟೆಯಲ್ಲಿ ವಿನಿಯೋಗಿಸಿ ಹೆಚ್ಚಿನ ಲಾಭ ತಂದುಕೊಡುವುದಾಗಿ ಆಮಿಷ ಒಡ್ಡಿದ್ದಾರೆ. 
ಅದನ್ನು ನಂಬಿದ ವ್ಯಕ್ತಿ 2025ರ ಜು.16ರಿಂದ ಡಿ.12ರವರೆಗೆ ವಿವಿಧ ಬ್ಯಾಂಕ್(Bank) ಖಾತೆಗಳ ಮೂಲಕ ಒಟ್ಟು 61 ಲಕ್ಷ ರೂ.ವರ್ಗಾಯಿಸಿದ್ದಾರೆ. ಈ ಬಗ್ಗೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net