13ರಿಂದ 20ನೇ ವರ್ಷದ ಚಿಂತನ ಕಾರ್ತಿಕ Chintana Kartika

ಶಿವಮೊಗ್ಗ: ವೆಂಕಟೇಶ ನಗರದಲ್ಲಿರುವ ಬಸವ ಕೇಂದ್ರದಿಂದ 20ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮ ನ.13ರಿಂದ ಡಿ. 13ರವರೆಗೆ ನಗರದ ವಿವಿಧೆಡೆ ನಡೆಯಲಿದೆ ಎಂದು ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ ಹೇಳಿದರು.
Chintana Kartika
ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಸವಕೇಂದ್ರದ ಉಪಾಧ್ಯಕ್ಷ ಪಿ.ಚಂದ್ರಪ್ಪ, ಕಾರ್ಯದರ್ಶಿ ಚಂದ್ರಶೇಖರ ತಲಗಿಹಾಳ್, ಪ್ರಮುಖರಾದ ಲವಕುಮಾರ್, ರುದ್ರಮುನಿ ಸಜ್ಜನ್, ಪ್ರಕಾಶ್, ಮಮತಾ, ಶಶಿಕಲಾ ಚಂದ್ರಪ್ಪ, ಗಾಯತ್ರಿ ಪಾಟೀಲ್, ನಿರಂಜನ ಸ್ವಾಮಿ, ಪ್ರಕಾಶ್ ಇದ್ದರು.
Published on: 

ಶಿವಮೊಗ್ಗ: ವೆಂಕಟೇಶ ನಗರದಲ್ಲಿರುವ ಬಸವ ಕೇಂದ್ರದಿಂದ 20ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮ ನ.13ರಿಂದ ಡಿ. 13ರವರೆಗೆ ನಗರದ ವಿವಿಧೆಡೆ ನಡೆಯಲಿದೆ ಎಂದು ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ ಹೇಳಿದರು.

ಬಸವಕೇಂದ್ರಕ್ಕೆ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಚರಮೂರ್ತಿಗಳಾಗಿ ಆಗಮಿಸಿ 20 ವರ್ಷ ಪೂರ್ಣವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಚಿಂತನ ಕಾರ್ತಿಕವನ್ನು ವಿಶೇಷವಾಗಿ ಆಯೋಜಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

13ರಂದು ಸಂಜೆ 6.30ಕ್ಕೆ ವೆಂಕಟೇಶ ನಗರದ ಬಸವಕೇಂದ್ರದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಎಂ.ವಿ.ಧನಂಜಯ ಕಾರ್ಯಕ್ರಮ ಉದ್ಘಾಟಿಸುವರು. ವಿಶ್ರಾಂತ ಕುಲಸಚಿವ ಡಾ. ಕೆ.ಸಿ.ಶಶಿಧರ್ ಪ್ರಾಸ್ತಾವಿಕ ಮಾತನಾಡುವರು. ಸೂಡಾ ಅಧ್ಯಕ್ಷ ಸಿ.ಜಿ.ಮಧುಸೂಧನ್ ಭಾಗವಹಿಸುವರು. ವಿದ್ಯುತ್ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಜಿ.ಶಶಿಧರ್, ಕಾರ್ಯಾಧ್ಯಕ್ಷ ಎಂ.ಆರ್.ಜಯದೇವಪ್ಪ ಉಪಸ್ಥಿತರಿರುವರು ಎಂದರು.

ಕಾರ್ತಿಕ ಮಾಸದಲ್ಲಿ ಪ್ರತಿ ದಿನ ಒಂದೊಂದು ಮನೆಯಲ್ಲಿ ಶಿವಾನುಭವ ಚಿಂತನೆ, ಭಜನೆ, ದಾಸೋಹ ನಡೆಯಲಿದೆ. ಚಿಂತನ ಕಾರ್ತಿಕದಲ್ಲಿ ಬಸವಣ್ಣ ಅವರ ವ್ಯಕ್ತಿತ್ವ ಹಾಗೂ ವಿಚಾರಧಾರೆಗಳ ಚಿಂತನೆಗೆ ಒತ್ತು ನೀಡುವಂತೆ ರೂಪಿಸಲಾಗಿದೆ. ಡಿ.12ರಂದು ಸಮಾರೋಪ ಸಮಾರಂಭ ಹಾಗೂ ಡಿ.13ರಂದು ಗಣಪರ್ವ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಬಸವಕೇಂದ್ರದ ಉಪಾಧ್ಯಕ್ಷ ಪಿ.ಚಂದ್ರಪ್ಪ, ಕಾರ್ಯದರ್ಶಿ ಚಂದ್ರಶೇಖರ ತಲಗಿಹಾಳ್, ಪ್ರಮುಖರಾದ ಲವಕುಮಾರ್, ರುದ್ರಮುನಿ ಸಜ್ಜನ್, ಪ್ರಕಾಶ್, ಮಮತಾ, ಶಶಿಕಲಾ ಚಂದ್ರಪ್ಪ, ಗಾಯತ್ರಿ ಪಾಟೀಲ್, ನಿರಂಜನ ಸ್ವಾಮಿ, ಪ್ರಕಾಶ್ ಸುದ್ದಿಗೋಷ್ಠಿಯಲ್ಲಿದ್ದರು.