12ರಂದು ಆಯನೂರಿಗೆ ನಿಖಿಲ್ ಭೇಟಿ (JD(S) Youth Wing)

(JD(S) Youth Wing)
 ಶಾರದಾ ಪೂರ‌್ಯಾನಾಯ್ಕಾ
ಶಾರದಾ ಪೂರ‌್ಯಾನಾಯ್ಕಾ
Published on: 

ಆಯನೂರು: ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಅ.12ರಂದು ಆಯನೂರಿಗೆ ಭೇಟಿ ನೀಡಲಿದ್ದಾರೆ ಎಂದು ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಹೇಳಿದರು.

ರೈತ ಸ್ವಾಭಿಮಾನ ರಾಜ್ಯ ಪ್ರವಾಸ ಹಿನ್ನೆಲೆಯಲ್ಲಿ ಅಂದು ಆಯನೂರಿನ ಪ್ರವಾಸಿ ಮಂದಿರದ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಳೆ ಬಾರದೆ ಮೆಕ್ಕೆಜೋಳ, ಭತ್ತ, ತೋಟದ ಬೆಳೆಗಳು ಹಾಳಾಗಿವೆ. ಮಳೆ ಕೊರತೆಯಿಂದ ಜಮೀನುಗಳನ್ನು ಬೀಳು ಬಿಟ್ಟಿದ್ದಾರೆ. ಕಷ್ಟದಲ್ಲಿರುವ ರೈತರನ್ನು ಮಾತನಾಡಿಸಲು ಜಮೀನುಗಳಿಗೆ ಭೇಟಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ರೈತರಿಗೆ ಅಗತ್ಯ ಸೌಲಭ್ಯ ಸಿಗುವಂತಾಗಬೇಕು. ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರ ಸಿಗಬೇಕು. ಇತ್ತೀಚೆಗೆ ನಡೆದ ಅಧಿವೇಶನದಲ್ಲಿಯೂ ಸಹ ಶಾಸಕರು ಬೇಡಿಕೆಯನ್ನು ಇಟ್ಟಿದ್ದು, ಹಿಂದೆ ಹೆಚ್ಚು ಮಳೆ ಬಂದು ಹಾನಿಯಾದಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮನೆಹಾನಿಗೆ ಹೆಚ್ಚಿನ ಪರಿಹಾರ ನೀಡಿದ್ದರು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net