ಬಳಿಕ ಕ್ಯಾಪಿಟಲ್ ಸ್ಟರ್ಲಿಂಗ್ ಯುಕೆ ಬ್ಯಾಂಕ್‌ನ ಮ್ಯಾನೇಜರ್ ಎಂದು ಹೇಳಿಕೊಂಡು ಕರೆ ಮಾಡಿದ್ದ ವಂಚಕರು, ಡಾ. ಅಲೆಕ್ಸ್ ಚಾರ್ಲ್ಸ್ ಅವರು ನಿಮ್ಮ ಖಾತೆಗೆ 110,000 ಪೌಂಡ್ಸ್(Pounds) (ವಿದೇಶಿ ಕರೆನ್ಸಿ) ವರ್ಗಾವಣೆ ಮಾಡಿದ್ದಾರೆ. ಆದರೆ ನಿಮ್ಮದು ಉಳಿತಾಯ ಖಾತೆ ಆದ ಕಾರಣ ಹಣವನ್ನು ರೂಪಾಯಿಗೆ ವರ್ಗಾವಣೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದರು. ಅಷ್ಟೋ ಪೌಂಡ್ಸ್ ಹಣವನ್ನು ನಿಮ್ಮ ವಿಳಾಸಕ್ಕೆ ಕೋರಿಯರ್(Courier) ಮಾಡುತ್ತೇವೆಂದು ಹೇಳಿ ಅದಕ್ಕಾಗಿ ಕೆಲಸ ಸೇವಾಶುಲ್ಕ ಭರಿಸಬೇಕೆಂದು ತಿಳಿಸಿದ್ದ.