ಶಿವಮೊಗ್ಗದಲ್ಲಿ ನಾಲ್ವರು ಅಪರಿಚಿತರಿಂದ ಚಾಕು ಇರಿತ: ಯುವಕ ಸಾವು, ಮತ್ತೊಬ್ಬ ಗಂಭೀರ

IMG-20210128-WA0000
Published on

ಶಿವಮೊಗ್ಗ: ನಗರದ ಎನ್ ಟಿ ರಸ್ತೆಯ ಸುಂದರ ಆಶ್ರಯ ಬಾರ್ ಎದುರು ಬುಧವಾರ ತಡರಾತ್ರಿ ಅಪರಿಚಿತರ ಗುಂಪೊಂದು ಇಬ್ಬರ ಮೇಲೆ ಚಾಕುವಿನಿಂದ ಇರಿದಿದ್ದಾರೆ. ಯುವಕನೊಬ್ಬ ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. 

ಸುಂದರ ಆಶ್ರಯ ಬಾರ್ ಸಮೀಪದ ನಿವಾಸಿ ಜೀವನ್ (28) ಮೃತಪಟ್ಟಿದ್ದು, ಕೇಶವ ಶೇಟ್(28) ಎಂಬಾತ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ರಾತ್ರಿ ಒಂದು ಗಂಟೆ ಸುಮಾರಿಗೆ ಬಾರ್ ಮುಂದೆ ಮಾತನಾಡುತ್ತಿದ್ದ ವೇಳೆ ಬಂದ ನಾಲ್ವರು ಚಾಕುವಿನಿಂದ‌ ಇರಿದು ಪರಾರಿಯಾಗಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. 

ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಘಟನೆ ಕುರಿತು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net