ಸಾದ್ವಿ ವಿರುದ್ಧ ಎಫ್‌ಐಆರ್ ದಾಖಲಿಸಲು ಟ್ವೀಟ್‌ನಲ್ಲಿ ಆಗ್ರಹ

sadhvi
Published on

ಶಿವಮೊಗ್ಗ: ನಗರದಲ್ಲಿ ಡಿ.25ರಂದು ಏರ್ಪಡಿಸಿದ್ದ ಹಿಂದು ಜಾಗರಣ ವೇದಿಕೆ ದಕ್ಷಿಣ ಪ್ರಾಂತದ ತ್ರೈಮಾಸಿಕ ಸಮ್ಮೇಳನದ ಸಾರ್ವಜನಿಕ ಸಭೆಯಲ್ಲಿ ಮಧ್ಯಪ್ರದೇಶದ ಲೋಕಸಭಾ ಸದಸ್ಯೆ ಸಾದ್ವಿ ಪ್ರಜ್ಞಾ ಸಿಂಗ್ ಪ್ರಚೋಧನಕಾರಿ ಮಾಡಿದ್ದಾರೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ತೆಹಸಿನ್ ಪೂನಾವಾಲಾ ಎಂಬುವವರು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಟ್ವೀಟ್ ಮಾಡಿ ಒತ್ತಾಯಿಸಿದ್ದಾರೆ.

ಚಾಕುವಿನಿಂದ ಸೊಪ್ಪು ಕತ್ತರಿಸಬಹುದು. ಅದನ್ನು ಮಹಿಳೆಯರು, ಯುವತಿಯರು ಆತ್ಮರಕ್ಷಣೆಗೂ ಬಳಸಿಕೊಳ್ಳಬಹುದು ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ. ಸ್ವಯಂ ರಕ್ಷಣೆಯ ಅಧಿಕಾರ ಎಲ್ಲರಿಗೂ ಇದೆ. ಪ್ರತಿ ಮನೆಗಳಲ್ಲೂ ಆಯುಧಗಳನ್ನು ಇರಿಸಿಕೊಳ್ಳಬೇಕು. ಅವಶ್ಯ ಎನಿಸಿದರೆ ಅದಕ್ಕೆ ಪರವಾನಗಿಯನ್ನೂ ಪಡೆಯಬೇಕೆಂದು ಭಾಷಣದಲ್ಲಿ ಸಾದ್ವಿ ಹೇಳಿದ್ದರು.

ಇದನ್ನು ಟ್ವೀಟ್‌ನಲ್ಲಿ ಪ್ರಸ್ತಾಪಿಸಿರುವ ತೆಹಸಿನ್ ಪೂನಾವಾಲಾ, ಸಮಾಜದ ಶಾಂತಿಗೆ ಭಗ್ನ ತರುವ ಯತ್ನವನ್ನು ಸಾದ್ವಿ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಸಾಮಾಜಿಕ ಜಾಲತಾಣದಲ್ಲಿ ಹಲವಾರು ಸಂಗತಿಗಳು ಚರ್ಚೆಯಾಗುತ್ತವೆ. ಅದೇ ಮಾದರಿಯಲ್ಲಿ ಈ ವಿಷಯವೂ ಪ್ರಸ್ತಾಪವಾಗಿದೆ. ದೂರು ದಾಖಲಿಸಿಕೊಳ್ಳುವ ಪ್ರಮೇಯ ಕಂಡು ಬರುತ್ತಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net