

ಉಡುಪಿ: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ರ್ಷಣೆ ಸಂದರ್ಭದಲ್ಲಿ ಹಿಂದೂಗಳ ಮನೆಗೆ ನುಗ್ಗಿ ಕಲ್ಲು ಹೊಡೆದು ಬೆದರಿಕೆ ಹಾಕಿದ್ದಾರೆ. ಘಟನೆಯ ಕುರಿತಾಗಿ ಆರಂಭಿಕ ಹಂತದಲ್ಲೇ ತನಿಖೆಯ ದಿಕ್ಕು ತಪ್ಪಿಸಲು ಸರಕಾರ ಪ್ರಯತ್ನ ನಡೆಸುತ್ತಿದೆ. ಸಿದ್ದರಾಮಯ್ಯ ಸರ್ಕಾರ ಕರ್ನಾಟಕವನ್ನು ಕಾಶ್ಮೀರ ಮಾಡಲು ಹೊರಟಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅರೋಪಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಾದಿತ ಬ್ಯಾನರ್ ಅಳವಡಿಸಿದಾಗ, ಎಸ್ಪಿಯವರ ನೇತೃತ್ವದಲ್ಲಿ ಬ್ಯಾನರ್ ಗೆ ಬಣ್ಣ ಬಳಿದಿದ್ದಾರೆ. ಆದರೆ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಜರುಗಿಸಿಲ್ಲ. ಗಲಭೆ ಮಾಡಿದವರನ್ನು ಅಮಾಯಕರ ಪಟ್ಟಿಯಲ್ಲಿ ಸೇರಿಸಿ, ಅವರನ್ನು ರಕ್ಷಣೆ ಮಾಡಲಾಗುತ್ತಿದೆ. ಮುಸಲ್ಮಾನರ ಓಲೈಗೆಗಾಗಿ ಪೋಲಿಸರಿಗೆ ಇದುವರೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿಲ್ಲ ಎಂದರು.
ಎರಡು ದಿನದ ಒಳಗಾಗಿ ಬಿಜೆಪಿ ರಾಜ್ಯಧ್ಯಕ್ಷರ ನೇತೃತ್ವದ ತಂಡ ಶಿವಮೊಗ್ಗದಲ್ಲಿ ಕಿಡಿಗೇಡಿಗಳಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತೇವೆ. ನಂತರ ಸರ್ಕಾರ ವಿರುದ್ದ ಯಾವ ರೀತಿಯ ಹೋರಾಟವನ್ನು ಮಾಡಬೇಕೆಂದು ತೀಮಾರ್ನಿಸುತ್ತೇವೆ ಎಂದರು.