

ಶಿವಮೊಗ್ಗ: ಮಹಾವೀರ ಜಯಂತಿ ಹಿನ್ನಲೆಯಲ್ಲಿ ಭಾನುವಾರ ನಗರದ ಎಲ್ಲ ಮಾಂಸದಂಗಡಿಗಳನ್ನು ಬಂದ್ ಮಾಡಲಾಗಿತ್ತು. ಹಾಗಾಗಿ ಜನರು ಲಷ್ಕರ್ ಮೊಹಲ್ಲಾದ ಮೀನಿನ ಮಾರುಕಟ್ಟೆಗೆ ಬೆಳ್ಳಂಬೆಳಗ್ಗೆ ಲಗ್ಗೆ ಇಟ್ಟಿದ್ದರು.
ಏಕಾಏಕಿ ನೂರಾರು ಜನರು ಒಂದೆಡೆ ಸೇರ್ಪಡೆಗೊಂಡಿದ್ದರಿಂದ ಪರಸ್ಪರ ಅಂತರ ಇರಲಿಲ್ಲ. ಬಹುತೇಕ ಜನರು ಮಾಸ್ಕ್ ಧರಿಸಿರಲಿಲ್ಲ. ಸ್ಯಾನಿಟೈಸರ್‌ನ್ನು ಕೇಳುವವರೇ ಅಲ್ಲಿರಲಿಲ್ಲ. ಹಾಗಾಗಿ ಬಹಳಷ್ಟು ಜನರು ಆತಂಕದಲ್ಲೇ ಮೀನು ಖರೀದಿ ಮಾಡುವಂತಾಯಿತು. ಮಾಂಸದಂಗಡಿಗಳು ಬಂದ್ ಇದ್ದ ಕಾರಣ ಪ್ರತಿ ಕೆಜಿ ಮೀನಿಗೆ 50ರಿಂದ 100 ರೂ. ಏರಿಕೆಯಾಗಿತ್ತು. ದುಬಾರಿಯಾದರೂ ಜನರು ಅನಿವಾರ್ಯವಾಗಿ ಮೀನು ಖರೀದಿಸಿ ಕೊಂಡೊಯ್ದರು. ಆನಂತರ ಪೊಲೀಸರು ಬಂದು ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು.