ಶಿವಮೊಗ್ಗದ ಕಿರಣ್‌ಗೆ ಬೆಳ್ಳಿ ಗದೆ

14141
Published on

ಹೊನ್ನಾಳಿ: ಪಟ್ಟಣದ ಬೀರಲಿಂಗೇಶ್ವರ ಕೆಂಡದ ಅರ್ಚನೆ ಮತ್ತು ಕಾರ್ತಿಕೋತ್ಸವ ನಿಮಿತ್ತ 3 ದಿನ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಕಿರಣ ಅವರು ಬೆಳ್ಳಿ ಗದೆ ಮತ್ತು 12 ಸಾವಿರ ರೂ. ನಗದು ಬಹುಮಾನವಾಗಿ ಗೆದ್ದುಕೊಂಡರು.

ಶುಕ್ರವಾರ ನಡೆದ ಅಂತಿಮ ಪಂದ್ಯದಲ್ಲಿ ಶಿವಮೊಗ್ಗದ ಕಿರಣ ಅವರು ಬೆಳಗಾವಿಯ ಬಸವ ಅವರನ್ನು ಸೋಲಿಸಿದರು. ಜಿಲ್ಲಾ
ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಶಿವಮೊಗ್ಗದ ಪೈಲ್ವಾನ್ ಕಿರಣ್‌ಗೆ ಬೆಳ್ಳಿ ಗದೆ ನೀಡಿ ಗೌರವಿಸಿದರು.

ಧಾರವಾಡ, ಕಲಬುರಗಿ, ಬೆಳಗಾವಿ, ಶಿವಮೊಗ್ಗ, ದಾವಣಗೆರೆ, ಹರಿಹರ, ಭಾನುವಳ್ಳಿ, ಶಿಕಾರಿಪುರ, ರಾಣಿಬೆನ್ನೂರು ಮತ್ತಿತರ ಭಾಗಗಳ ಪೈಲ್ವಾನರು ಆಗಮಿಸಿದ್ದರು. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು, 3ನೇ ದಿನದ ಕುಸ್ತಿ ಪಂದ್ಯದ ಖರ್ಚನ್ನು ಕುಸ್ತಿ ಕಮಿಟಿಗೆ ಕೊಡುವುದಾಗಿ ಘೋಷಿಸಿದರು.

ವೈಯಕ್ತಿಕವಾಗಿ ಪೈಲ್ವಾನರಿಗೆ 2 ಸಾವಿರ ರೂ. ನೀಡಿ ಪ್ರೋತ್ಸಾಹಿಸಿದರು. ಅಣ್ಣಪ್ಪ ಸ್ವಾಮಿ, ಕುಮಾರಸ್ವಾಮಿ, ಎಚ್.ಬಿ.ಗಿಡ್ಡಪ್ಪ, ಗೌಡ್ರು ನರಸಪ್ಪ, ಬುದ್ಧಿವಂತ ನರಸಿಂಹಪ್ಪ, ಪಪಂ ಮಾಜಿ ಅಧ್ಯಕ್ಷ ಎಂ.ಎಸ್.ಪಾಲಾಕ್ಷಪ್ಪ, ನಿವೃತ್ತ ಶಿಕ್ಷಕ ಗಾಳಿ ನಾಗರಾಜ, ಕುಸ್ತಿ ಕಮಿಟಿ ಅಧ್ಯಕ್ಷ ಎಚ್.ಡಿ.ವಿಜೇಂದ್ರಪ್ಪ, ಎಂ.ವಾಸಪ್ಪ, ಗುಡ್ಡಜ್ಜಿ ತಮ್ಮಣ್ಣ, ಕಾಡಸಿದ್ದಪ್ಪ, ಚೊರಡಿ ಶಿವು, ಇಟ್ಟಿಗೆ ಬಸವರಾಜ, ಗಾಳೇಶ, ದಿಡಗೂರು ಪಾಲಾಕ್ಷಪ್ಪ, ಕೆ.ವಿ.ಚನ್ನಪ್ಪ, ಪ.ಪಂ.ಅಧ್ಯಕ್ಷ ಕೆ.ವಿ.ಶ್ರೀಧರ, ಕತ್ತಿಗೆ ನಾಗರಾಜ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net