

ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್ನೋಟ್ ಬರೆದಿಟ್ಟು ಜಿಲ್ಲಾಧಿಕಾರಿ ಕಚೇರಿಯಿಂದ ನಾಪತ್ತೆಯಾಗಿದ್ದ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದಾರೆ.
ಮೇಲಧಿಕಾರಿಗಳ ಕಿರುಕುಳ ಕಾರಣದಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್ನೋಟ್ ಬರೆದಿಟ್ಟು ಎಫ್ಡಿಎ ಗಿರಿರಾಜ್ ನಾಪತ್ತೆಯಾಗಿದ್ದ. ಸೆ. 28ರಂದು ಈ ಘಟನೆ ನಡೆದಿತ್ತು.
ಗಿರಿರಾಜ್ ಅವರನ್ನು ಪತ್ತೆ ಮಾಡಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಾಕಷ್ಟು ಶೋಧ ಕಾರ್ಯ ನಡೆಸಿತ್ತು. ಆದಾಗ್ಯೂ ಗಿರಿರಾಜ್ ಪತ್ತೆಯಾಗಿರಲಿಲ್ಲ. ಇದಾದ ಬಳಿಕ ಗಿರಿರಾಜ್ ಪತ್ನಿ ಜ್ಯೋತಿ, ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ನಾಪತ್ತೆ ಆಗಿರುವ ಪತಿಯನ್ನು ಹುಡುಕಿ ಕೊಡಬೇಕು ಎಂದು ಜ್ಯೋತಿ ದೂರಿನ ಮೂಲಕ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದರು. ಗಿರಿರಾಜ್ ಪತ್ತೆಗಾಗಿ ಜಿಲ್ಲಾಡಳಿತದ ಜತೆಗೆ ಪೊಲೀಸರು ಭದ್ರಾವತಿ ತಾಲೂಕಿನಲ್ಲಿ ತೀವ್ರ ಶೋಧ ಕಾರ್ಯ ಮುಂದುವರರಿಸಿದ್ದರು.
ಇದೀಗ ಗಿರಿರಾಜ್ ಅಸ್ವಸ್ಥ ಸ್ಥಿತಿಯಲ್ಲಿ ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದು, ಅವರಿಗೆ ಚಿಕಿತ್ಸೆ ಕೊಡಿಸಿ ಮನೆಗೆ ಕರೆತರಲು ಪೊಲೀಸರು ಮುಂದಾಗಿದ್ದಾರೆ. (ದಿಗ್ವಿಜಯ ನ್ಯೂಸ್)