ಜಿಲ್ಲಾಧಿಕಾರಿ ಕಚೇರಿ ನೌಕರನೇ ನಾಪತ್ತೆ; ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್​ನೋಟ್​ ಬರೆದಿಟ್ಟು ಕಾಣೆ

ಗಿರಿರಾಜ್
Published on

ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿಯ ನೌಕರರೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್​ನೋಟ್ ಬರೆದಿಟ್ಟು ಕಾಣೆಯಾಗಿದ್ದು, ಶಿವಮೊಗ್ಗ ಡಿಸಿ ಕಚೇರಿ ಸಿಬ್ಬಂದಿವರ್ಗದಲ್ಲಿ ಒಂದು ಆತಂಕ ಉಂಟಾಗಿದೆ.

ಮೇಲಧಿಕಾರಿಗಳ ಕಿರುಕುಳ ಕಾರಣದಿಂದಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್​ನೋಟ್​ ಬರೆದಿಟ್ಟಿರುವ ನೌಕರ ಇಂದು ಬೆಳಗ್ಗಿನಿಂದ ನಾಪತ್ತೆಯಾಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್​ಡಿಎ) ಗಿರಿರಾಜ್​ ಕಾಣೆಯಾದವರು.

ಇವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿಟ್ಟಿರುವ ಡೆತ್​ನೋಟ್​​ನಲ್ಲಿ ಮೇಲಧಿಕಾರಿಗಳ ಕಿರುಕುಳದ ಕುರಿತು ಉಲ್ಲೇಖವಿದೆ. ನಾಪತ್ತೆ ಆಗಿರುವ ನೌಕರ ಗಿರಿರಾಜ್​ ಅವರನ್ನು ಪತ್ತೆ ಮಾಡಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದೆ. ಅದಾಗ್ಯೂ ಗಿರಿರಾಜ್ ಪತ್ತೆಯಾಗದ್ದರಿಂದ ಅವರ ಪತ್ನಿ ಜ್ಯೋತಿ ಶಿವಮೊಗ್ಗದ ಜಯನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ನಾಪತ್ತೆ ಆಗಿರುವ ಪತಿಯನ್ನು ಹುಡುಕಿ ಕೊಡಬೇಕು ಎಂದು ಜ್ಯೋತಿ ದೂರಿನ ಮೂಲಕ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಗಿರಿರಾಜ್ ಪತ್ತೆಗಾಗಿ ಜಿಲ್ಲಾಡಳಿತದ ಜತೆಗೆ ಪೊಲೀಸರು ಭದ್ರಾವತಿ ತಾಲೂಕಿನಲ್ಲಿ ನಾಳೆ ಮತ್ತೆ ಶೋಧ ಕಾರ್ಯ ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net