ಬಿಜೆಪಿಗೆ ಅಧಿಕಾರ ಮುಖ್ಯವಲ್ಲ: ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ

IMG-20201122-WA0035
Published on

ಶಿವಮೊಗ್ಗ: ಬಿಜೆಪಿಯ ಮೂಲ ಉದ್ದೇಶ ಅಧಿಕಾರ ಹಿಡಿಯುವುದು ಮಾತ್ರವಲ್ಲ. ಬದಲಿಗೆ ಸಂಘಟನೆಯನ್ನು ಗಟ್ಟಿಗೊಳಿಸುವುದು ಹಾಗೂ ದೇಶವನ್ನು ಮತ್ತಷ್ಟು ಸದೃಢಗೊಳಿಸುವುದಾಗಿದೆ ಎಂದು ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್‌ನಾಯ್ಕ್ ಹೇಳಿದರು.
ತಾಲೂಕಿನ ಬೀರನಕೆರೆ ಮಠದಲ್ಲಿ ಭಾನುವಾರ ಬಿಜೆಪಿ ಶಿವಮೊಗ್ಗ ಗ್ರಾಮಾಂತರ ಮಂಡಲದ ಎರಡು ದಿನಗಳ ಪ್ರಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಕ್ಷ ಸದೃಢವಾಗಬೇಕಾದರೆ ಶಿಸ್ತುಬದ್ಧ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ವಿಶ್ವದಲ್ಲೇ ಬಿಜೆಪಿ ಈಗ ವಿಭಿನ್ನವಾದ ಪಕ್ಷವಾಗಿದ್ದು ಉತ್ತಮವಾದ ಕಾರ್ಯದಿಂದ ಪಕ್ಷವನ್ನು ಕಟ್ಟಬೇಕಿದೆ ಎಂದರು.
ಗ್ರಾಮಾಂತರ ಅಧ್ಯಕ್ಷ ರತ್ನಕರ ಶೆಣೈ ಮಾತನಾಡಿ, ಪಕ್ಷದ ಸಿದ್ಧಾಂತವನ್ನು ನೆನಪು ಮಾಡಿಕೊಳ್ಳುವುದು ನಮ್ಮ ಮುಂದಿನ ಸಂಘಟನೆಯ ಕಾರ್ಯಗಳಿಗೆ ಸಹಕಾರಿ ಆಗಲಿದೆ. ಕರೊನಾ ಸಂಕಷ್ಟದ ಸಮಯದಲ್ಲೂ ನಮ್ಮ ಕಾರ್ಯಕರ್ತರು ದೇಶಕ್ಕೆ ತನ್ನದೇ ಆದ ಸಹಾಯ ಮಾಡಿದ್ದಾರೆ. ಇದು ಬಿಜೆಪಿ ಶಕ್ತಿ ಎಂದರು.
 ರಾಜ್ಯ ಪ್ರಕೋಷ್ಠಗಳ ಸಂಚಾಲಕ ಎಂ.ಬಿ.ಭಾನುಪ್ರಕಾಶ್, ಜಿಪಂ ಸದಸ್ಯೆ ಸೌಮ್ಯಾ ಭೋಜಾನಾಯ್ಕ್, ಶಿವಮೊಗ್ಗ ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಗ್ರಾಮಂತರ ಮಾಜಿ ಅಧ್ಯಕ್ಷ ಜಿ.ಇ.ವಿರೂಪಾಕ್ಷಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧರ್ಮಪ್ರಸಾದ್, ಆರ್.ಟಿ.ಗೋಪಾಲ್, ಗಿರೀಶ್ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net