ಪ್ರಶಾಂತ್ ಮಾಡಾಳ್ ತನಿಖೆ ಪ್ರಗತಿಯಲ್ಲಿದೆ: ಗೃಹ ಸಚಿವ ಆರಗ

araga
Published on

ಶಿವಮೊಗ್ಗ: ಲೋಕಾಯುಕ್ತ ಪೊಲೀಸರು ಬೆಂಗಳೂರಿನಲ್ಲಿ ಕೆಎಸ್‌ಡಿಎಲ್ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಅವರನ್ನು ಬಂಧಿಸಿದ್ದಾರೆ. ಲಂಚ ಪಡೆದ ಆರೋಪ ಅವರ ಮೇಲಿದೆ. ಇನ್ನೂ ವಿಚಾರಣೆ ಹಂತದಲ್ಲಿರುವುದರಿಂದ ಈ ಪ್ರಕರಣದ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ. ಪ್ರಕರಣದ ಸೂಕ್ತ ತನಿಖೆಗೆ ಆದೇಶಿಸಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಈ ಹಣ ಯಾರಿಗೆ ಸೇರಿದ್ದು? ಯಾವ ಕಾರಣಕ್ಕಾಗಿ ಪ್ರಶಾಂತ್ ಹಣೆ ಪಡೆದರು? ಎಂಬುದನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ತನಿಖೆ ಒಂದು ಹಂತಕ್ಕೆ ಬಾರದೇ ಯಾವುದೇ ತೀರ್ಮಾನಕ್ಕೆ ಬರುವುದು ಸಾಧ್ಯವಿಲ್ಲ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಪ್ರಶಾಂತ್ ಪ್ರಕರಣದಲ್ಲಿ 40 ಪರ್ಸೆಂಟ್ ಕಮೀಷನ್ ಆರೋಪದೊಂದಿಗೆ ಟ್ವೀಟ್ ಸಮರ ನಡೆಸಿರುವ ಕಾಂಗ್ರೆಸ್ ಕುರಿತು ಆಕ್ರೋಶ ವ್ಯಕ್ತಪಡಿಸಿದ ಗೃಹ ಸಚಿವರು, ಈ ಹಿಂದೆ ಕಾಂಗ್ರೆಸ್‌ನವರು 50-60 ಪರ್ಸೆಂಟ್ ಕಮೀಷನ್ ಪಡೆಯುತ್ತಿದ್ದರು. ಕೆಲಸ ಮಾಡದೇ ಬಿಲ್ ಮಂಜೂರು ಮಾಡಿಕೊಳ್ಳುತ್ತಿದ್ದರು. ಲೋಕಾಯುಕ್ತದ ಕತ್ತು ಹಿಸುಕಿ ಎಸಿಬಿ ರಚನೆ ಮಾಡಿದ್ದು ಕಾಂಗ್ರೆಸ್‌ನವರು. ಈಗ ನಮಗೆ ನೀತಿ ಪಾಠ ಹೇಳುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net