'ಸಿಡಿ' ಪ್ರಕರಣ ರಾಜಕಾರಣಿಗಳಿಗೆ ತಕ್ಕ ಪಾಠ: ಅನಿತಾ ಕುಮಾರಿ

29 smg Anitha kumari (1)
Published on

ಶಿವಮೊಗ್ಗ: ರಾಜಕಾರಣದಲ್ಲಿ ಆಮೀಷಕ್ಕೋ ಅಥವಾ ದಿಕ್ಕು ತಪ್ಪಿಸಲೋ ಮಹಿಳೆಯರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಕುಮಾರಿ ಹೇಳಿದರು.
ಮಾಜಿ ಸಚಿವ ರಮೇಶ್ ಜಾರಕಿಹೋಳಿ ಅವರ ಸಿಡಿ ಹಗರಣ ಹೊಲಸು ರಾಜಕಾರಣಿಗಳಿಗೆ ತಕ್ಕ ಪಾಠವಾಗಿದೆ. ಆಸೆ, ಆಮೀಷಗಳನ್ನು ಒಡ್ಡಿ ಕೆಲವರು ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಇಂತಹ ಕೆಟ್ಟ ಸಂಸ್ಕೃತಿಯನ್ನು ಕಿತ್ತು ಹಾಕಬೇಕಿದೆ ಎಂದರು.
ರಾಜಕಾರಣಕ್ಕೆ ತನ್ನದೆಯಾದ ಸಂಸ್ಕೃತಿ ಇದೆ. ಅದನ್ನು ಮೀರುವ ಜನಪ್ರತಿನಿಧಿಗಳು ಈ ಸಮಾಜದಕ್ಕೆ ಅಗತ್ಯವಿಲ್ಲ. ಅಂತವರು ರಾಜಕಾರಣದಲ್ಲಿದ್ದೂ ಪ್ರಯೋಜನವಿಲ್ಲ. ತಕ್ಷಣವೇ ರಾಜಕೀಯ ನಿವೃತ್ತಿ ಘೋಷಿಸಿ ಮನೆಯಲ್ಲಿ ಇರುವುದೇ ಒಳಿತು ಎಂದರು.
ಮಹಿಳಾ ದಿನದ ಅಂಗವಾಗಿ ಜಿಲ್ಲೆಯಾದ್ಯಂತ ವಿವಿಧ ಕ್ಷೇತ್ರಗಳ ಸಾಧಕಿಯರನ್ನು ಗುರುತಿಸಿ ಅಭಿನಂದಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net