ಟಿಟಿ ವಾಹನ ಡಿಕ್ಕಿ: ಯುಪಿ ಯುವಕ ಸಾವು

23 smg 5
Published on

ಶಿವಮೊಗ್ಗ: ನಗರದ ಎನ್‌ಟಿ ರಸ್ತೆಯಲ್ಲಿ ಭಾನುವಾರ ಮಧ್ಯಾಹ್ನ ಟೆಂಪೋ ಟ್ರಾವೆಲರ್ ಡಿಕ್ಕಿಯಾಗಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾನೆ. ಉತ್ತರ ಪ್ರದೇಶದ ಮಾಲೀಕ್‌ರಾಮ್ (21) ಮೃತ ಬೈಕ್ ಸವಾರ.

ಪಂಚವಟಿ ಕಾಲನಿಯಲ್ಲಿ ಬಾಡಿಗೆಗೆ ರೂಮ್ ಮಾಡಿಕೊಂಡಿದ್ದ. ಪೈಪ್ ಅಳವಡಿಕೆ ಕಾಮಗಾರಿಗೆಂದು ಶಿವಮೊಗ್ಗಕ್ಕೆ ಬಂದಿದ್ದ. ಈ ವೇಳೆ ಆರ್‌ಎಂಎಲ್ ನಗರದ ಕಡೆಯಿಂದ ಬರುವಾಗ ಗಾಜನೂರಿಗೆ ಅತಿ ವೇಗವಾಗಿ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ಆತ ಡಿವೈಡರ್‌ಗೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ.

ಅದೇ ಟೆಂಪೋದಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಂಜೆ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಬೈಕ್ ನುಜ್ಜಗುಜ್ಜಾಗಿದ್ದು, ಟಿಟಿ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net