

ಉಡುಪಿ: ಶಿವಮೊಗ್ಗದಲ್ಲಿ ನಿರಂತರವಾಗಿ ಅಹಿತಕರ ಘಟನೆಗಳು ನಡೆಯುತ್ತಿದೆ. ಕೈಯಲ್ಲಿ ತಲ್ವಾರ್ ಹಿಡಿದು, ವಿಕೃತ ನೃತ್ಯ ಮಾಡಿ ಹಿಂದುಗಳನ್ನು ಪ್ರಚೋದಿಸಿದ್ದಾರೆ. ಬೀದಿಗಳಲ್ಲಿ ವಿವಾದಾತ್ಮಕ ಬ್ಯಾನರ್ ಗಳನ್ನ ಕೂಡ ಅಳವಡಿಕೆ ಮಾಡಿದ್ದಾರೆ. ನಂತರ ಕಲ್ಲೆಸೆದಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಯುವ ಬ್ರಿಗೇಡ್ ಪ್ರವರ್ತಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.
ಸೋಮವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿಡಿಗೇಡಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆಯಲ್ಲಿ ತಪ್ಪಿತಸ್ಥರು ಯಾರು ಎಂಬುದು ಗಮನಕ್ಕೆ ಬಂದಿದೆ. ಶಿವಮೊಗ್ಗ ಜ್ವಾಲಾಮುಖಿಯಲ್ಲಿ ಕುದಿಯುತ್ತಿದೆ ಎಂದರು.
ಚಿಕ್ಕಮಕ್ಕಳು ತರುಣರು ಈ ಗಲಾಟೆಯಲ್ಲಿ ಭಾಗಿಯಾಗಿದ್ದು, ಮುಂದಿನ ಎರಡು ಪೀಳಿಗೆ ಇಂತಹ ಪರಿಸ್ಥಿತಿ ನೋಡುವ ಸಾಧ್ಯತೆ ಇದೆ. ಮಸೀದಿಯ ಮುಂಭಾಗ ಹಸಿರು ಅಖಂಡ ಭಾರತ ಮತ್ತು ಕೆಲ ಪೋಸ್ಟರ್ ಗಳನ್ನು ಅಳವಡಿಸಿದ್ದಾರೆ. ಔರಂಗಜೇಬ ಅಖಂಡ ಸಾಮ್ರಾಜ್ಯವನ್ನು ಕಟ್ಟಿದ ಎಂದು ಪೋಸ್ಟರಲ್ಲಿ ಬಿಂಬಿಸಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಕಾಲದಲ್ಲಿ ಅಖಂಡ ಭಾರತ ಆಗಬಹುದು. ಪಿ.ಓ.ಕೆ ಅಲ್ಲಿ ಮುಸಲ್ಮಾನರೇ ನಮ್ಮನ್ನು ಭಾರತಕ್ಕೆ ಸೇರಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ದಾಂದಲೆಗೆ ಸಿದ್ದರಾಗಿದ್ದರು ಎಂದು ಎಸ್ಪಿ ಅವರೇ ಹೇಳಿಕೆ ಕೊಟ್ಟಿದ್ದಾರೆ. ಇಟ್ಟಿಗೆ, ತಲ್ವಾರ್, ವಾಹನಗಳು ಬೇರೆ ಸ್ಥಳದಿಂದ ಬಂದಿದ್ದವು ಎಂದವರು ಹೇಳಿದರು.