ಕಾನೂನು ಮೀರಿದವರಿಗೆ ಶಿಕ್ಷೆ ಖಚಿತಪಡಿಸಬೇಕು: ಪೇಜಾವರ ಶ್ರೀ

pejavara sri
Published on

ಉಡುಪಿ: ಪೊಲೀಸರ ಮೇಲೆ ಹಲ್ಲೆಯಾದರೆೆ ಸರ್ಕಾರ ಏನು ಮಾಡುತ್ತಿದೆ. ಪೊಲೀಸರ ಮೇಲೆ ಕಲ್ಲೆಸೆಯುವರಿಗೆ ಭಯ ಇಲ್ಲ. ಕಾನೂನು ಮೀರಿದವರಿಗೆ ಶಿಕ್ಷೆಯನ್ನು ಅರ್ಥಮಾಡಿಸುವ ಅಗತ್ಯವಿದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತಿರ್ಥ ಸ್ವಾಮೀಜಿ ಹೇಳಿದರು.

ಶಿವಮೊಗ್ಗ ಗಲಭೆ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದ ಸ್ವಾಸ್ಥ್ಯ ಕೆಡಿಸುವ ಕಾರ್ಯಕ್ಕೆ ಯಾರೂ ಕೈ ಹಾಕಬಾರದು. ನ್ಯಾಯ ತೀಮಾರ್ನವನ್ನು ಪ್ರಜೆಗಳು ಕೈಗೆತ್ತಿಕೊಳ್ಳಬಾರದು. ಸಮಾಜದಲ್ಲಿ ಒಂದು ಬಾರಿ ಅಶಾಂತಿ ಸೃಷ್ಟಿಯಾದರೆ ಅದಕ್ಕೆ ಕೊನೆ ಇರುವುದಿಲ್ಲ. ಕಾಯಾಂರ್ಗ, ಶಾಸಕಾಂಗ, ನ್ಯಾಯಾಂಗ ಸಮರ್ಥವಾಗಿ ಕಾರ್ಯನಿರ್ವಹಣೆ ಮಾಡಬೇಕು. ಇದರಿಂದ ಗಲಭೆ ತಡೆಯಬಹುದು. ಮೂರು ಅಂಗಗಳ ಕಾರ್ಯನಿರ್ವಹಣೆ ಸಾಲುತ್ತಿಲ್ಲ ಎಂಬುದು ಇಂತಹ ಘಟನೆಯಿಂದ ತಿಳಿಯುತ್ತಿದೆ ಎಂದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ತೀಮಾರ್ನಕ್ಕೆ ಬದ್ಧವಾಗಿರುವುದು ಅಗತ್ಯವಾಗಿದ್ದು, ಕೋರ್ಟ್​ ಆದೇಶವನ್ನು ಮೀರಿ ಹೋಗಲು ಸಾಧ್ಯವಿಲ್ಲ. ಹೋರಾಟಗಳು ಜನಾಭಿಪ್ರಾಯವನ್ನು ರೂಪಿಸುತ್ತದೆ. ಸಮರ್ಪಕವಾದ ವಾದ ಮಂಡಿಸಿ, ವಸ್ತು ಸ್ಥಿತಿಯನ್ನು ಕೋರ್ಟ್​ ಗೆ ವಿವರಿಸಬೇಕು. ಕುಡಿಯಲು ನೀರು ಮೊದಲು, ಬೆಳೆಗೆ ನಂತರ ಎಂಬ ಪಾಲಿಸಿ ಇರಲಿ. ಈ ವಾದವನ್ನು ಕೋರ್ಟ್​ ನಲ್ಲಿ ಸಮರ್ಥವಾಗಿ ಮಂಡಿಸಬೇಕಾಗುತ್ತದೆ ಎಂದವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net