ಶಿವಮ್ಮ, ಬೇಬಿಜಾನ್ ಗೆಲುವಿನ ನಗೆ

Shivamma rajanna
Published on

ಚಳ್ಳಕೆರೆ: ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಶಿವಮ್ಮ ರಾಜಣ್ಣ, ಉಪಾಧ್ಯಕ್ಷರಾಗಿ ಬೇಬಿಜಾನ್ ಶುಕ್ರವಾರ ಆಯ್ಕೆಗೊಂಡರು.

25 ಸದಸ್ಯರ ಸಂಖ್ಯಾ ಬಲದ ಪಂಚಾಯಿತಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿವಮ್ಮ 15, ಗೀತಾ 10, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬೇಬಿಜಾನ್ 14, ಜಯಮ್ಮ 11 ಪಡೆದರು.

ತಹಸೀಲ್ದಾರ್ ರೇಹಾನ್ ಪಾಷಾ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಪಂಚಾಯಿತಿ ಅಧಿಕಾರಿ ಎನ್.ಪಾಲಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net