ಶಿವಳ್ಳಿ ಸ್ಪಂದನ ಕಟೀಲು ವಲಯ ವಾರ್ಷಿಕೋತ್ಸವ

shivalli
ಶಿಬರೂರು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದಲ್ಲಿ ಶಿವಳ್ಳಿ ಸ್ಪಂದನ ಕಟೀಲು ವಲಯದ ಶಿವಳ್ಳಿ ಸ್ಪಂದನದ ವಾರ್ಷಿಕೋತ್ಸವ ನಡೆಯಿತು. ಸುರಗಿರಿ ದೇಗುಲದ ಅರ್ಚಕ ಅಂಗಡಿಮಾರ್ ವಿಶ್ವೇಶ ಭಟ್, ಸೀತಾರಾಮ ಶಾಸ್ತ್ರಿ ಪೆರ್ಮುದೆ, ವಿಜಯದಾಸ ಆಚಾರ್, ಪ್ರದ್ಯುಮ್ನ ರಾವ್ ಕೈಯೂರಗುತ್ತು, ಧಾರ್ಮಿಕ ಪರಿಷತ್ ಸದಸ್ಯ ಸುಬ್ರಹ್ಮಣ್ಯ ಪ್ರಸಾದ್, ಅತ್ತೂರುಬೈಲು ನಾರಾಯಣ ಉಡುಪ ಮತ್ತಿತರರಿದ್ದರು.
Published on

ಕಿನ್ನಿಗೋಳಿ: ವೃತ್ತಿಯಲ್ಲಿ ಪ್ರಾಮಾಣಿಕತೆ ಇರಬೇಕು. ಧರ್ಮಾಚರಣೆಯಲ್ಲಿ ಶ್ರದ್ಧೆ ಇರಬೇಕು. ಮನೆಯಲ್ಲಿ ಸಂಸ್ಕಾರ ಕಲಿಸಿಕೊಡುವ ಕಲೆ, ಸಂಸ್ಕೃತಿಯನ್ನು ತಿಳಿ ಹೇಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸುರಗಿರಿ ದೇಗುಲದ ಅರ್ಚಕ ಅಂಗಡಿಮಾರ್ ವಿಶ್ವೇಶ ಭಟ್ ಹೇಳಿದರು.

ಶಿಬರೂರು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದಲ್ಲಿ ಶಿವಳ್ಳಿ ಸ್ಪಂದನ ಕಟೀಲು ವಲಯದ ಶಿವಳ್ಳಿ ಸ್ಪಂದನದ ವಾರ್ಷಿಕೋತ್ಸವದಲ್ಲಿ ಉಪನ್ಯಾಸ ನೀಡಿದರು.

ಈ ಸಂದರ್ಭ ಶೈಕ್ಷಣಿಕ ಸಾಧಕರಿಗೆ ಪ್ರತಿಭಾ ಪುರಸ್ಕಾರ, ಅಷ್ಟೋತ್ತರ ಶತ ಸುಹಾಸಿನೀ ಆರಾಧನೆ ಸಂಪನ್ನಗೊಂಡಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಶಿವಳ್ಳಿ ಸ್ಪಂದನದ ವಿವಿಧ ಗ್ರಾಮಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಿವೃತ್ತ ಸೇನಾನಿ ಅರವಿಂದ ಭಟ್ ಅವರನ್ನು ಗೌರವಿಸಲಾಯಿತು.

ಸೀತಾರಾಮ ಶಾಸ್ತ್ರಿ ಪೆರ್ಮುದೆ, ವಿಜಯದಾಸ ಆಚಾರ್, ಪ್ರದ್ಯುಮ್ನ ರಾವ್ ಕೈಯೂರಗುತ್ತು, ಧಾರ್ಮಿಕ ಪರಿಷತ್ ಸದಸ್ಯ ಸುಬ್ರಹ್ಮಣ್ಯ ಪ್ರಸಾದ್, ಅತ್ತೂರುಬೈಲು ನಾರಾಯಣ ಉಡುಪ, ವಾಸುದೇವ ಉಡುಪ, ಶಿವಳ್ಳಿ ಸ್ಪಂದನ ಅಧ್ಯಕ್ಷ ಅನಂತ ಪದ್ಮನಾಭ ಆಚಾರ್ಯ, ರಾಮಚಂದ್ರ ಉಡುಪ, ಸುನೀಲ್ ಭಟ್ ತಾಳಿಪಾಡಿ ಮತ್ತಿತರರಿದ್ದರು. ಜ್ಯೋತಿ ಉಡುಪ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net