

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಶಿವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಘೋಷಣೆಯಾಗಿದ್ದ ಚುನಾವಣೆಯನ್ನು ಮತ್ತೊಮ್ಮೆ ಮುಂದೂಡಿ ಚುನಾವಣಾಧಿಕಾರಿ ಪಿ. ಮಧುಸೂದನ್ ಗುರುವಾರ ಆದೇಶಿಸಿದ್ದಾರೆ.
ಸಂಘದ ಸದಸ್ಯರಿಗೆ ಚುನಾವಣಾ ನೋಟಿಸ್ ನೀಡದೆ, ಚುನಾವಣೆ ನಡೆಸಲು ಮುಂದಾಗಿದ್ದ ಕ್ರಮಕ್ಕೆ ಸಹಕಾರ ಸಂಘಗಳ ಉಪ ನಿಬಂಧಕರು ತಡೆಯೊಡ್ಡಿದ್ದಾರೆ. ಇದರಿಂದ ಜು. 28ರಂದು ನಡೆಯಬೇಕಿದ್ದ ಚುನಾವಣೆ ಮತ್ತೆ ಮುಂದೂಡಿಕೆಯಾಗಿದೆ.
ಸಹಕಾರ ಸಂಘಗಳ ನಿಯಮಾವಳಿಯಂತೆ ಚುನಾವಣೆ ನಡೆಸುವಂತೆ ಧಾರವಾಡ ಹೈಕೋರ್ಟ್ ಜು. 23ರಂದು ಆದೇಶಿಸಿತ್ತು. ಇದರ ಬೆನ್ನಲ್ಲೇ ಸಂಘದ ಚುನಾವಣಾಧಿಕಾರಿ ಪಿ. ಮಧುಸೂಧನ ಅವರು ತರಾತುರಿಯಲ್ಲಿ 28ರಂದು ಚುನಾವಣೆ ಘೋಷಿಸಿದ್ದರು.
ಆದರೆ, ಚುನಾವಣೆಗೆ ಸಂಬ0ಸಿ ಸದಸ್ಯರಿಗೆ ನಿಯಮಾನುಸಾರ ನೋಟಿಸ್ ತಲುಪಿಸಿಲ್ಲ ಎಂದು ಸಂಘದ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ. ಚುನಾವಣಾಧಿಕಾರಿ ನಡೆ ಹಾಲು ಉತ್ಪಾದಕರ ಸಂಘದ ಸದಸ್ಯರು ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಮಾಹಿತಿ ಇಲ್ಲದೆ ಚುನಾವಣೆ ನಡೆಸುತ್ತಿದ್ದು, ಇದು ಕಾನೂನುಬಾಹಿರ ಎಂದು ಆರೋಪಿಸಿದರು. ಕೂಡಲೇ ಚುನಾವಣೆಯನ್ನು ತಡೆದು ಕಾನೂನು ಪ್ರಕಾರ ಚುನಾವಣೆ ನಡೆಸಬೇಕು ಎಂದು ಪಟ್ಟು ಹಿಡಿದಿದ್ದರು.
ಸಂಘದ ಸದಸ್ಯರ ಅರ್ಜಿ ಪರಿಶೀಲಿಸಿದ ಉಪ ನಿಬಂಧಕರು ತಕ್ಷಣ ಚುನಾವಣೆ ಮುಂದೂಡುವ0ತೆ ಚುನಾವಣಾಽಕಾರಿಗೆ ಸೂಚಿಸಿದ್ದಾರೆ. ಇದರಿಂದ ಜು. 28ರಂದು ನಡೆಯಬೇಕಿದ್ದ ಶಿವಳ್ಳಿ ಹಾಲು ಉತ್ಪಾದಕರ ಸಂಘದ ಚುನಾವಣೆ ಮತ್ತೊಂದು ಬಾರಿ ಮುಂದೂಡಿಕೆಯಾಗಿದೆ.