

ತುಬಚಿ: ಗ್ರಾಮದ ಶಿವಲಿಂಗೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಏ.4ರಿಂದ 13ರ ವರೆಗೆ ಜರುಗಲಿದೆ.
ಡಾ.ಅಲ್ಲಮಪ್ರಭು ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀಮಠದಲ್ಲಿ ಏ.4ರಿಂದ ನಿತ್ಯ ಸಂಜೆ 7 ಗಂಟೆಗೆ ಪ್ರವಚನ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಏ.8ರಂದು ಮುಂಜಾನೆ 9 ಗಂಟೆಗೆ ಶಿವಲಿಂಗೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಏ.11ರಂದು ಶಿವಲಿಂಗೇಶ್ವರ ಮಹಾಸ್ವಾಮಿಗಳ 20ನೇ ಪುಣ್ಯ ಸ್ಮರಣೋತ್ಸವ, ಏ.12ರಂದು ಬೆಳಗ್ಗೆ 9 ಗಂಟೆಗೆ ಕರಡಿ ಮೇಳ ಉದ್ಘಾಟನಾ ಕಾರ್ಯಕ್ರಮ, ಸಂಜೆ 7 ಗಂಟೆಗೆ ಶಿವಲಿಂಗೇಶ್ವರ ಶಿವಯೋಗಿಗಳ ರಥೋತ್ಸವ ಸಂಪನ್ನಗೊಳ್ಳಲಿದ್ದು, ರಾತ್ರಿ 10.30ಕ್ಕೆ ಸಾವಿರ ಹಳ್ಳಿಯ ಸರದಾರ ನಾಟಕ ಪ್ರದರ್ಶನಗೊಳ್ಳಲಿದೆ.
ಏ.13ರಂದು ಬೆಳಗ್ಗೆ 10 ಗಂಟೆಗೆ ಪಲ್ಲಕ್ಕಿ ಉತ್ಸವ ಜರುಗಲಿದೆ ಎಂದು ಶ್ರೀಮಠ ಪ್ರಕಟಣೆ ತಿಳಿಸಿದೆ.