

ತೇರದಾಳ: ತಾಲೂಕಿನ ಹಳಿಂಗಳಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿರುವ ತೇರದಾಳ ಜಾಕ್‌ವೆಲ್ ಘಟಕದಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ 4ರ ಅಡಿಯಲ್ಲಿ ಅಂದಾಜು 55 ಲಕ್ಷ ರೂ. ವೆಚ್ಚದ ತಡೆಗೋಡೆ ಕಾಮಗಾರಿಗೆ ಶಾಸಕ ಸಿದ್ದು ಸವದಿ ಶನಿವಾರ ಭೂಮಿ ಪೂಜೆ ನೆರವೇರಿಸಿದರು.
ನಂತರ ಕೃಷ್ಣಾ ನದಿ ತೀರದಲ್ಲಿ ಪ್ರಗತಿಯಲ್ಲಿರುವ ಶಿವಲಿಂಗೇಶ್ವರ ಏತ ನೀರಾವರಿ ಕಾಮಗಾರಿ ವೀಕ್ಷಿಸಿ, ದೂರವಾಣಿ ಮೂಲಕ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಮಾತನಾಡಿದ ಅವರು, ಈ ಭಾಗದ ಬಹುದೊಡ್ಡ ನೀರಾವರಿ ವ್ಯವಸ್ಥೆಗಾಗಿ ನಿರ್ಮಿಸಲಾಗುತ್ತಿರುವ ಶಿವಲಿಂಗೇಶ್ವರ ಏತನೀರಾವರಿಯ ಮೊದಲನೇ ಹಂತದ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದ್ದು, ಎರಡನೇ ಹಂತದ ಕಾಮಗಾರಿ ಕಾರ್ಯ ಪ್ರಾರಂಭವಾಗಿದೆ ಎಂದರು.
ಮುಖಂಡ ಸದಾಶಿವ ಹೊಸಮನಿ, ಕೇದಾರಿ ಪಾಟೀಲ, ಶಂಕರ ಕುಂಬಾರ, ಮಾಧವರಾವ ಪಾಟೀಲ, ಸಚೀನ ಕೊಡತೆ ಹಾಗೂ ಪುರಸಭೆ ಅಧಿಕಾರಿಗಳು ಇದ್ದರು.