ಶಿವಲಿಂಗೇಶ್ವರ ರಥೋತ್ಸವ ಅದ್ದೂರಿ

6Aratal1
Published on

ಅರಟಾಳ: ಅನ್ನ ನೀರು, ಗಾಳಿ ಕೊಟ್ಟು ಹೃದಯದಲ್ಲಿ ಪ್ರೀತಿ ತುಂಬಿದ್ದೆ ಶಿವಲಿಂಗೇಶ್ವರರು. ಅವರು ನಡೆದುಹೋದ ದಾರಿಯಲ್ಲಿ ನಾವೆಲ್ಲರೂ ನಡೆದರೆ ಪುಣ್ಯ ಸಿಗುತ್ತದೆ ಎಂದು ಹಿರೇಸಾವಳಗಿ ಶಿವಲಿಂಗೇಶ್ವರ ಮಠದ ಗುರುನಾಥ ಸ್ವಾಮೀಜಿ ಹೇಳಿದರು.

ಸಮೀಪದ ಅರಟಾಳ-ಸಾವಳಗಿ ಗುಡ್ಡದ ಶ್ರೀ ಶಿವಲಿಂಗೇಶ್ವರ ದೇವರ ರಥೋತ್ಸವಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ದೀಪ ಉರಿಯಲು ಹಣತೆ, ಎಣ್ಣೆ, ಬತ್ತಿ ಬೇಕು. ಹಣತೆ ಒಡೆಯಬಹುದು. ಎಣ್ಣೆ ತೀರಬಹುದು, ಭತ್ತಿ ಸುಡಬಹುದು ಆದರೆ, ಬೆಳಗುವ ಜ್ಯೋತಿ ಹಳೆಯದಾಗುವುದಿಲ್ಲ. ಹೊಸತನದೊಂದಿಗೆ ಬೆಳಗುತ್ತಿರುತ್ತದೆ. ನಾವು ಮಾಡುವ ಕಾಯಕ ಇತಿಹಾಸವಾಗುವಂತಿರಬೇಕು ಎಂದರು.

ಶ್ರೀ ಶಿವಲಿಂಗೇಶ್ವರ, ಶ್ರೀ ಮಾಳಿಂಗೇಶ್ವರ, ಭರಮದೇವರ ಪಲ್ಲಕ್ಕಿ ಉತ್ಸವ ವಿಜೃಂಭನೆಯಿಂದ ಜರುಗಿತು. ಸಂಜೆ 5 ಗಂಟೆಗೆ ಶ್ರೀ ಶಿವಲಿಂಗೇಶ್ವರ ರಥೋತ್ಸವ ವಾದ್ಯಮೇಳ, ಜಯಘೋಷದೊಂದಿಗೆ ನೆರವೇರಿತು. ಬಳಿಕ ಅನ್ನಪ್ರಸಾದ ಜರುಗಿತು.

ವಿವೇಕಾನಂದ ಮಠದ, ಮಲ್ಲಿಖಾರ್ಜುನ ಹಿರೇಮಠ, ಜ್ಯೋತಿಬಾ ಜಾಧವ, ಭೀಮು ಜಾಧವ, ಶ್ರೀಕಾಂತ ಗೌಳಿ, ಶಿವಾಜಿ ಪಾಟೋಳಿ,

ನಿಂಗಪ್ಪ ಹಿಪ್ಪರಗಿ, ಮಲ್ಲಿಕಾರ್ಜುನ ಹೊನಗೌಡ, ಸಿದ್ದು ಕ್ಷೀರಸಾಗರ, ಗುರುದೇವ ಕೆಂಚಗೊಂಡ, ಬಸವರಾಜ ಹಿರೇಕುರಬರ, ಅರಟಾಳ, ಸಾವಳಗಿ, ಹಾಲಳ್ಳಿ, ತುಂಗಳ, ತುಬಚಿ, ಕುರಗೋಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net